alex Certify ಸಮೀಕ್ಷೆಯಲ್ಲಿ ‘ಬಿಗ್ ಬಿ’ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮೀಕ್ಷೆಯಲ್ಲಿ ‘ಬಿಗ್ ಬಿ’ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

Amitabh Bachchan is India's Most Trusted Face While Virat Kohli is Most Charming: TIARA Report

2003ರಲ್ಲಿ ತನ್ನ ಚಾಕ್ಲೇಟ್ ‌ಗಳಲ್ಲಿ ಹುಳುಗಳು ಕಂಡುಬಂದು ತನ್ನ ಉತ್ಪನ್ನಗಳ ಸೇಲ್ಸ್‌ ಪಾತಾಳಕ್ಕೆ ಇಳಿದು ಹೈರಾಣಾಗಿದ್ದ ಕ್ಯಾಡ್‌ಬರಿಯ ಸ್ಟೋರಿ ನಿಮಗೆ ಗೊತ್ತಿರಬಹುದು.

ಇದೇ ಸಂದರ್ಭದಲ್ಲಿ ಬೂದಿಯಿಂದ ಮೇಲೆದ್ದು ಬರಲು ಪಣತೊಟ್ಟಂತೆ ಕಂಡ ಕ್ಯಾಡ್‌ಬರಿ, ತನ್ನ ಉತ್ಪನ್ನಗಳನ್ನು ಬಹಳ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಉತ್ಪಾದಿಸುತ್ತಿದ್ದು, ಅವುಗಳು ಸೇಫ್‌ ಆಗಿವೆ ಎಂದು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಶುರು ಮಾಡಿ ’ವಿಶ್ವಾಸ್’ ಅಭಿಯಾನಕ್ಕೆ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ರನ್ನು ನೇಮಕ ಮಾಡಿಕೊಂಡಿತ್ತು.

ಇದರ ಪರಿಣಾಮ ಕ್ಯಾಡ್‌ಬರಿಯ ಸೇಲ್ಸ್‌ನಲ್ಲಿ ಒಮ್ಮೆಲೇ 50%ನಷ್ಟು ಏರಿಕೆ ಕಂಡುಬಂದಿತ್ತು.

ಆ ಘಟನೆ ಕಳೆದು ಎರಡು ದಶಕಗಳ ಬಳಿಕವೂ ಬಿಗ್‌ಬಿ ಇನ್ನೂ ಸಹ ಭಾರತದ ಜಾಹೀರಾತು ಸ್ಪೇಸ್‌ನಲ್ಲಿ ಅಷ್ಟೇ ನಂಬಿಕಸ್ಥ ದನಿಯಾಗಿದ್ದಾರೆ. TIRA (Trust, Identify, Attractive, Respect, and Appeal) ನಡೆಸಿದ ಸಂಶೋಧನೆಯೊಂದರಲ್ಲಿ, ಬಿಗ್‌ಬಿ 2020ರಲ್ಲೂ ಸಹ ಅತ್ಯಂತ ನಂಬಿಕಸ್ಥ ದನಿ ಎಂದು ತಿಳಿದುಬಂದಿದೆ.

ದೇಶದ 23 ನಗರಗಳಲ್ಲಿ 60,000 ಜನರ ಬಳಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ, 88% ಮಂದಿ ಬಿಗ್‌ಬಿ ದೇಶದ ಅತ್ಯಂತ ನಂಬಿಕಸ್ಥ ದನಿ ಎಂದಿದ್ದರೆ, 86.7% ಮಂದಿ ಅಕ್ಷಯ್‌ ಕುಮಾರ್‌ಗೆ ಮತ ನೀಡಿದ್ದಾರೆ.

ಇನ್ನು ಬಾಲಿವುಡ್‌ನ ಅತ್ಯಂತ ನಂಬಿಕಸ್ಥ ಹಾಗೂ ಅತ್ಯಂತ ಸುಂದರ ನಟಿಯಾಗಿ ದೀಪಿಕಾ ಪಡುಕೋಣೆರನ್ನು ಜನ ಆಯ್ಕೆ ಮಾಡಿದ್ದಾರೆ. ನಂತರದ ಸ್ಥಾನವು ಐಶ್ವರ್ಯಾ ರೈಗೆ ಸಿಕ್ಕಿದೆ.

ಇದೇ ವೇಳೆ ದೇಶದ ಅತ್ಯಂತ ಹ್ಯಾಂಡ್ಸಮ್‌ ಸೆಲೆಬ್ರಿಟಿ ಎನ್ನುವ ಶ್ರೇಯಕ್ಕೆ ಟೀಂ ಇಂಡಿಯಾ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...