
ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯನ್ನು ಅಮಿತಾಬ್ ಹಂಚಿಕೊಂಡಿದ್ದಾರೆ.ಮೊಮ್ಮಗಳು ಹಾಗೂ ಸೊಸೆ ಮನೆಗೆ ಹೋಗಿದ್ದಾರೆ.ಖುಷಿಗೆ ಕಣ್ಣೀರು ಬಂದಿತ್ತು. ಅಳಬೇಡ. ನೀವು ಬೇಗ ಗುಣವಾಗಿ ಮನೆಗೆ ಬರ್ತಿರಾ ಎಂದು ಮೊಮ್ಮಗಳು ಹೇಳಿದಳು.ನನಗೆ ಭರವಸೆ ನೀಡ್ತಾಳೆ. ನಾನು ಅವಳನ್ನು ನಂಬಬೇಕೆಂದು ಅಮಿತಾಬ್ ಹೇಳಿದ್ದಾರೆ.
ಬ್ಲಾಗ್ ನಲ್ಲಿ ಅಮಿತಾಬ್ ಅನೇಕ ಸಂಗತಿಗಳನ್ನು ಬರೆದಿದ್ದಾರೆ.ಅವ್ರು ನಿಧನರಾಗಲಿ ಎಂದು ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೂ ಅಮಿತಾಬ್ ಉತ್ತರ ನೀಡಿದ್ದಾರೆ.