ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ನಟನಾ ಶೈಲಿ ಮೂಲಕವೇ ಅಭಿಮಾನಿಗಳ ಮನಸ್ಸನ್ನ ಗೆದ್ದಂತಹ ಚೆಲುವೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಈ ನಟಿ ತಮ್ಮ ಕಲರ್ಫುಲ್ ಫೋಟೋಗಳನ್ನ ಪೋಸ್ಟ್ ಮಾಡ್ತಾನೇ ಇರ್ತಾರೆ. ಇದೀಗ ತಮ್ಮ ಮತ್ತೊಂದು ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ನಟಿ ಚೆಕ್ ಮೇಟ್ ಅಂತಾ ಹೇಳ್ತಿದ್ದಾರೆ,
ಕಪ್ಪು ಬಿಳಿ ಬಣ್ಣದ ಹೋಭಿಕಾ ಮಿನಿ ಡ್ರೆಸ್ನಲ್ಲಿ ಆಲಿಯಾ ಭಟ್ ಸಖತ್ ಹಾಟ್ ಹಾಕಿ ಕಾಣ್ತಿದ್ದಾರೆ. ಪೊನಿ ಸ್ಟೈಲ್ ಕೇಶ ವಿನ್ಯಾಸ ಹಾಗೂ ಸಿಂಪಲ್ ಮೇಕಪ್ನಲ್ಲಿ ಇರುವ ಫೋಟೋ ಅಪ್ಲೋಡ್ ಮಾಡಿರುವ ಆಲಿಯಾ, ಸಿಂಡ್ರೆಲ್ಲಾ ರಾಜ ಬೇಕೆಂದು ಬೇಡಿಕೊಳ್ಳಲಿಲ್ಲ. ಬದಲಾಗಿ ಒಳ್ಳೆಯ ಡ್ರೆಸ್ ಹಾಗೂ ನೈಟ್ಔಟ್ಗಾಗಿ ಕೇಳಿಕೊಂಡಿದ್ದಳು ಅಂತಾ ಕ್ಯಾಪ್ಶನ್ ಹಾಕಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಟ್ಕೇಕ್ನಂತೆ ಸೇಲ್ ಆಗ್ತಿದೆ.