ಒಂಟಿಯಾಗಿ ಮಾಡುವ ಕೆಲಸದ ಪ್ರಮಾಣಕ್ಕಿಂತ, ಒಟ್ಟಿಗೆ ಮಾಡಿದರೆ ಹೆಚ್ಚು. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಬೆಲ್ ಬಾಟಮ್ ಚಿತ್ರ ತಂಡ, ಚಿತ್ರೀಕರಣ ಪೂರೈಸಿದ ಜಗತ್ತಿನ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಂದು ತಂಡವಾಗಿ ಕೆಲಸ ಮಾಡಿದ ಎಲ್ಲರಿಗೂ ನಟ ಅಕ್ಷಯ್ ಕುಮಾರ್ ಧನ್ಯವಾದ ಹೇಳಿದ್ದಾರೆ. ಲೈಟ್ ಬಾಯ್, ಟೆಕ್ನೀಷಿಯನ್ ತಂಡದಿಂದ ಹಿಡಿದು ನಾಯಕನಟಿ ವಾಣಿ ಕಪೂರ್, ಲಾರಾ ದತ್ತಾ, ಹುಮಾ ಖುರೇಷಿ, ನಿರ್ದೇಶಕ ರಂಜಿತ್ ತಿವಾರಿ ಎಲ್ಲರೂ ಸೇರಿ ಇಡೀ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಮಾತ್ರ ಇದು ಸಾಧ್ಯವಾಗಿದೆ ಎಂದಿದ್ದಾರೆ. ಅಕ್ಷಯ ಕುಮಾರ್ ಗೆ ನಿರ್ಮಾಪಕ ವಿಶು ಭಾಗ್ನಾನಿ ಕೂಡ ಧನ್ಯವಾದ ಅರ್ಪಿಸಿದ್ದಾರೆ.
ನೂರಾರು ಜನರ ಆರೋಗ್ಯ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಯಾವ ಅಡ್ಡಿ-ಆತಂಕವಿಲ್ಲದೆ ಚಿತ್ರೀಕರಣ ಸಂಪನ್ನಗೊಂಡಿದೆ. 2021 ರ ಏಪ್ರಿಲ್ 2 ರಂದು ಅಕ್ಷಯ್ ಕುಮಾರ್ ಅಭಿನಯದ ʼಬೆಲ್ ಬಾಟಮ್ʼ ಚಿತ್ರ ಬಿಡುಗಡೆ ಅಣಿಯಾಗುತ್ತಿದೆ.