ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಸಾಕ್ಷಿ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ.
ಇತ್ತೀಚಿಗೆ ಅಕ್ಷಯ್ ಕುಮಾರ್ ವಿಡಿಯೊವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ 32 ವರ್ಷದ ಹಿಂದಿನ ಕಥೆಯೊಂದನ್ನು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಫಿಲ್ಮ್ ಜರ್ನಿ ಆರಂಭಿಸುವುದಕ್ಕೆ ಮೊದಲು ಅಕ್ಷಯ್ ಕುಮಾರ್ ಒಬ್ಬ ಪ್ರಖ್ಯಾತ ಫೋಟೋಗ್ರಾಫರ್ ಬಳಿ ಕೆಲಸ ಮಾಡುತ್ತಿದ್ದರಂತೆ. ಆಗ ಅವರಿಗೆ ಸಂಬಳ ನೀಡಿರಲಿಲ್ಲವಂತೆ.
ಆ ಫೋಟೋಗ್ರಾಫರ್ ಜತೆ ಜುಹು ಪ್ರಾಂತ್ಯದ ದೊಡ್ಡ ಬಂಗಲೆಯ ಫೋಟೋಶೂಟ್ ಮಾಡಲು ಅಕ್ಷಯ್ ಹೋಗಿದ್ದರಂತೆ. ಆಗ ಅಲ್ಲಿನ ವಾಚ್‌ಮ್ಯಾನ್ ಅಲ್ಲಿಂದ ಓಡಿಸಿದ್ದರಂತೆ. ಇದೀಗ ಅದೇ ಸ್ಥಳದಲ್ಲಿ ಜಾಗ ಖರೀದಿಸಿ ಬಂಗಲೆ ಕಟ್ಟಿಸಿದ್ದಾರೆ.
ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಅಕ್ಷಯ್ ಕುಮಾರ್‌ಗೆ ಅನೇಕರು ಶಹಭಾಸ್‌ಗಿರಿ ನೀಡಿದ್ದಾರೆ.