alex Certify ಕೊರೊನಾದಿಂದ ಗುಣಮುಖರಾದ ಅಕ್ಷಯ್​ ಕುಮಾರ್​ ಮನೆಗೆ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖರಾದ ಅಕ್ಷಯ್​ ಕುಮಾರ್​ ಮನೆಗೆ ವಾಪಸ್

ಕೊರೊನಾ ವೈರಸ್​ ಸೋಂಕಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಕ್ಷಯ್​ ಕುಮಾರ್​ ಪತ್ನಿ ಹಾಗೂ ಲೇಖಕಿ ಟ್ವಿಂಕಲ್​ ಖನ್ನಾ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಗುಡ್​ ನ್ಯೂಸ್​ನ್ನು ಶೇರ್​ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಹಾಗೂ ತಮ್ಮ ಏಕವರ್ಣೀಯ ವ್ಯಂಗ್ಯಚಿತ್ರವನ್ನ ಶೇರ್​ ಮಾಡಿರುವ ಟ್ವಿಂಕಲ್​ ಖನ್ನಾ, ಅಕ್ಕಿ ಕೊನೆಗೂ ಮನೆಗೆ ವಾಪಸ್ಸಾಗಿದ್ದಾರೆ. ಸುರಕ್ಷಿತವಾಗಿ ಅಕ್ಷಯ್​ ಖನ್ನಾ ಮನೆಗೆ ವಾಪಸ್ಸಾಗಿದ್ದಕ್ಕೆ ಖುಷಿಯಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಟ್ವಿಂಕಲ್​ ಖನ್ನಾರ ಈ ಪೋಸ್ಟ್​​ಗೆ ಹುಮಾ ಖುರೇಷಿ ಸೇರಿದಂತೆ ಸಾಕಷ್ಟು ಬಾಲಿವುಡ್​ ತಾರೆಯರು ಕಮೆಂಟ್​ ಮೂಲಕ ಸಂತಸ ಹೊರಹಾಕಿದ್ದಾರೆ.

ರಾಮ್​ ಸೇತು ಸಿನಿಮಾಗಾಗಿ ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ನುಶ್ರತ್​ ಭರುಚ್ಚಾ ಜೊತೆ ಶೂಟಿಂಗ್​​ನಲ್ಲಿದ್ದ ವೇಳೆ ಅಕ್ಷಯ್​ ಕುಮಾರ್​ ಸೋಂಕಿಗೆ ಒಳಗಾಗಿದ್ದಾರೆ. ನಾನು ಹೋಂ ಕ್ವಾರಂಟೈನ್​​ನಲ್ಲಿದ್ದೇನೆ ಹಾಗೂ ಸೂಕ್ತ ವೈದ್ಯಕೀಯ ಸಲಹೆಯನ್ನ ಪಡೆಯುತ್ತಿದ್ದೇನೆ. ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಕ್ಕಿ ಹೇಳಿಕೊಂಡಿದ್ದರು.

https://www.instagram.com/p/CNjsZu_D0Vc/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...