alex Certify ಮಗಳ ಕಾರಣಕ್ಕೆ ತನ್ನ ಬಟ್ಟೆ ಖರೀದಿ ಮರೆತ ಐಶ್ವರ್ಯ ರೈ ಬಚ್ಚನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಕಾರಣಕ್ಕೆ ತನ್ನ ಬಟ್ಟೆ ಖರೀದಿ ಮರೆತ ಐಶ್ವರ್ಯ ರೈ ಬಚ್ಚನ್…!

NBT

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಕೊರೊನಾ ಗೆದ್ದು ಬಂದಿದ್ದಾರೆ. ಮಗಳ ಜೊತೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಐಶ್ವರ್ಯ ಮನೆಗೆ ಬಂದ ನಂತ್ರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಐಶ್ವರ್ಯ ಮಗಳಿಗಾಗಿ ಸಾಕಷ್ಟು ಬದಲಾಗಿದ್ದಾರೆ.

ಈ ಹಿಂದೆ ಮಗಳು ಆರಾಧ್ಯ ಕಾರಣಕ್ಕೆ ಐಶ್ವರ್ಯ ಮಂಗಳಸೂತ್ರವನ್ನು ಚಿಕ್ಕದು ಮಾಡಿಕೊಂಡಿದ್ದರು. ಆರಾಧ್ಯಗಾಗಿ ಸಿನಿಮಾದಿಂದ ದೂರವಿದ್ದಾರೆ. ಆರಾಧ್ಯ ಹುಟ್ಟುಹಬ್ಬದ ತಯಾರಿಯಲ್ಲಿ ಐಶ್ವರ್ಯ ಬಟ್ಟೆ ಖರೀದಿ ಮರೆತಂತೆ ಕಾಣಿಸುತ್ತದೆ.

ಆರಾಧ್ಯ ಹುಟ್ಟುಹಬ್ಬಕ್ಕೆ ಬಾಲಿವುಡ್ ಕಲಾವಿದರ ದಂಡು ಬಂದಿತ್ತು. ಎಲ್ಲರೂ ಬೇರೆ ಬೇರೆ ಸ್ಟೈಲ್ ನಲ್ಲಿ ಮಿಂಚಿದ್ದರು. ಫ್ಯಾಷನ್ ಗೆ ರೋಲ್ ಮಾಡೆಲ್ ಆಗಿರುವ ಐಶ್ವರ್ಯ ಮಾತ್ರ ಹಳೆ ಡ್ರೆಸ್ ಧರಿಸಿದ್ದರು. ಚಿತ್ರದ ಪ್ರಚಾರಕ್ಕೆ ಧರಿಸಿದ್ದ ಬಿಳಿ ಬಣ್ಣದ ಸಲ್ವಾರ್ ಧರಿಸಿದ್ದರು ಐಶ್ವರ್ಯ. ಮಗಳ ಜನನದ ನಂತ್ರ ಮಗಳಿಗೆ, ಮಗಳ ಸ್ಟೈಲ್ ಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಿರುವ ಐಶ್, ತಮ್ಮ ಸ್ಟೈಲ್ ಮರೆತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...