
ನವದೆಹಲಿ: ಸುದೀರ್ಘ 5 ಗಂಟೆಗಳ ವಿಚಾರಣೆಯ ನಂತರ ಐಶ್ವರ್ಯಾ ರೈ ಬಚ್ಚನ್ ಜಾರಿ ನಿರ್ದೇಶನಾಲಯದ ಕಚೇರಿಯಿಂದ ಹೊರಬಂದಿದ್ದಾರೆ.
ಪನಾಮ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ನೀಡಿದ್ದು, ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದ ಐಶ್ವರ್ಯಾ ರೈ 5 ಗಂಟೆಗಳ ವಿಚಾರಣೆಯ ನಂತರ ಸೋಮವಾರ ಸಂಜೆ ಜಾರಿ ನಿರ್ದೇಶನಾಲಯದ ಕಚೇರಿಯಿಂದ ಹೊರಬಂದಿದ್ದಾರೆ.
ಈ ವೇಳೆ ಭಾರಿ ಸಂಖ್ಯೆಯಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಅವರನ್ನು ಪ್ರಶ್ನಿಸಲು ಮುಂದಾಗಿದ್ದು, ಮಾಸ್ಕ್ ಧರಿಸಿದ್ದ ಐಶ್ವರ್ಯಾ ಅಲ್ಲಿಂದ ತೆರಳಿದ್ದಾರೆ.