ನೀಲಿ ಕಂಗಳ ಸುಂದರಿ ಐಶ್ವರ್ಯಾ ರೈ ಭಾನುವಾರ ತಮ್ಮ ತಾಯಿ ವೃಂದಾ ರೈ ಜನ್ಮ ದಿನವನ್ನ ಆಚರಿಸಿದ್ರು. ಬರ್ತಡೇಯ ಕೆಲ ಸುಂದರ ಕ್ಷಣಗಳ ಫೋಟೋಗಳನ್ನ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವೃಂದಾ ರೈರ 70ನೇ ಜನ್ಮ ದಿನಾಚರಣೆಯಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಬಚ್ಛನ್ ಹಾಗೂ ಪುತ್ರಿ ಆರಾಧ್ಯ ಕೂಡ ಹಾಜರಿದ್ದರು.
ವೃಂದಾ ಬರ್ತಡೇಯಲ್ಲಿ ಆರಾಧ್ಯಯ ಆಕರ್ಷಣೆಯ ಕೇಂದ್ರವಾಗಿದ್ದರು ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಇನ್ಸ್ಟಾಗ್ರಾಂನಲ್ಲಿ ಆರಾಧ್ಯ ತನ್ನ ಅಜ್ಜಿಗೆ ಸುಂದರವಾದ ಸಂದೇಶವನ್ನ ತಿಳಿಸಿದ್ದಾರೆ. ಮಗಳ ಈ ಸಂದೇಶವನ್ನ ತಾಯಿ ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
‘ 70ನೇ ಜನ್ಮ ದಿನಾಚರಣೆಯ ಶುಭಾಶಯಗಳು ಪ್ರೀತಿಯ ಡೊಡಾ. ನಿಮ್ಮನ್ನ ಅನಂತವಾಗಿ ಪ್ರೀತಿಸುತ್ತೇವೆ. ನೀವು ನಮ್ಮ ಜಗತ್ತು. ಎಂಜೆಲ್ಗೆ ದೇವರು ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ. ಐಶ್ವರ್ಯಾ, ಅಭಿಷೇಕ್ ಹಾಗೂ ಆರಾಧ್ಯ ವೃಂದಾ ರೈ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
https://www.instagram.com/p/CPOWuXOpAsM/?utm_source=ig_web_copy_link