‘ಬಿಗ್ ಬಾಸ್’ ಸ್ಪರ್ಧಿಯಾಗಿ ಭಾಗವಹಿಸಿದ್ದ 68 ವರ್ಷದ ವೃದ್ಧೆಯೊಬ್ಬರು ಫೋಟೋ ಶೂಟ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಇದಕ್ಕಾಗಿ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಇಂತಹ ಉಡುಪು ಅಗತ್ಯವಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.
ಕೇರಳದಲ್ಲಿ ಸೆಲೆಬ್ರಿಟಿಯಾಗಿರುವ 68 ವರ್ಷದ ವೃದ್ಧೆ ರಜಿನಿ ಚಾಂಡಿ ಟ್ರೋಲ್ ಗೆ ಒಳಗಾಗಿದ್ದು ಇವರು ಚಿತ್ರನಟಿಯೂ ಹೌದು. ರಜಿನಿ ಅವರ ಉಡುಪಿನ ಕುರಿತು ಕೆಲವರು ಟೀಕೆ ಮಾಡುತ್ತಿರುವುದಕ್ಕೆ ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಅವರಿಗಿಷ್ಟ ಬಂದ ಉಡುಪು ಧರಿಸುವುದು ಅವರ ಹಕ್ಕು ಎಂದು ರಜಿನಿ ಪರ ಇರುವವರು ವಾದಿಸುತ್ತಿದ್ದಾರೆ.
ಇದರ ಮಧ್ಯೆ ರಜಿನಿ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಟೀಕಾಕಾರರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಹಿಂದೆ ಗ್ಲಾಮರಸ್ ದಿರಿಸಿನಲ್ಲಿ ಪತಿ ಜೊತೆ ಪಾರ್ಟಿಗೆ ಹೋಗುತ್ತಿದ್ದೆ. ಆಗ ನನ್ನನ್ನು ಈಗ ಟೀಕೆ ಮಾಡುತ್ತಿರುವವರು ಇನ್ನೂ ಹುಟ್ಟಿರಲಿಲ್ಲ ಎಂದು ರಜಿನಿ ಹೇಳಿದ್ದಾರೆ. ಅಲ್ಲದೆ ನಕಲಿ ಖಾತೆಗಳನ್ನು ಸೃಷ್ಟಿಸಿ ನನ್ನನ್ನು ಗೇಲಿ ಮಾಡಲಾಗುತ್ತಿದೆ. ಧೈರ್ಯವಿದ್ದರೆ ನಿಜವಾದ ಖಾತೆಯಿಂದ ಈ ಕೆಲಸ ಮಾಡಿ ಎಂದು ರಜಿನಿ ಸವಾಲು ಹಾಕಿದ್ದಾರೆ.
https://www.instagram.com/p/CJvtpRWJL8x/?utm_source=ig_web_copy_link
https://www.instagram.com/p/CJvuzULpUSb/?utm_source=ig_web_copy_link
https://www.instagram.com/p/CJ0Nygupb5R/?utm_source=ig_web_copy_link