alex Certify ರಿಯಾ ವಾಟ್ಸಾಪ್‌ ಚಾಟ್‌ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾ ವಾಟ್ಸಾಪ್‌ ಚಾಟ್‌ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ವಿಷ್ಯ ಹೊರಗೆ ಬರ್ತಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಪ್ರೇಮಿ ಹಾಗೂ ನಟಿ ರಿಯಾ ವಾಟ್ಸಾಪ್, ಡ್ರಗ್ಸ್ ಮಾಫಿಯಾ ಬಗ್ಗೆ ಸುಳಿವು ನೀಡ್ತಿದೆ.

ಡಿಲಿಟ್ ಆಗಿದ್ದ ವಾಟ್ಸಾಪ್ ಚಾಟನ್ನು ಹಿಂಪಡೆಯಲಾಗಿದೆ. ಇದ್ರಲ್ಲಿ ರಿಯಾ ಹಾಗೂ ಗೌರವ್ ಆರ್ಯ ಮಧ್ಯೆ ನಡೆದ ಮಾತುಕತೆ ಬಹಿರಂಗವಾಗಿದೆ. ಗೌರವ್ ಡ್ರಗ್ಸ್ ವ್ಯಾಪಾರಿಯಾಗಿದ್ದಾನೆ. ಜಾರಿ ನಿರ್ದೇಶನಾಲಯ ರಿಯಾ ಹಾಗೂ ಗೌರವ್ ಆರ್ಯ ಡ್ರಗ್ಸ್ ಸಂಭಾಷಣೆಯ ವಿವರಗಳನ್ನು ಬಹಿರಂಗಪಡಿಸಿದೆ.

ಈಗ ರಿಯಾ ಫೋನ್ ಪರಿಶೀಲನೆಗೆ ಸಿಬಿಐ, ಇಡಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ. ಇದ್ರ ನಂತ್ರ ಸಿಬಿಐ ಸುಶಾಂತ್ ಅವರ ಫ್ಲಾಟ್ಮೇಟ್ ಸಿದ್ಧಾರ್ಥ್ ಪಿಥಾನಿ, ಕುಕ್ ನೀರಜ್, ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ, ಸಿಬ್ಬಂದಿ ದೀಪೇಶ್ ಸಾವಂತ್ ಅವರನ್ನು ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಇವರು ಸುಶಾಂತ್-ರಿಯಾಗೆ ಹತ್ತಿರವಾಗಿದ್ದರು. ಎಲ್ಲರೂ ಒಟ್ಟಿಗಿರ್ತಿದ್ದರು. ಡ್ರಗ್ಸ್ ವಿಷ್ಯದಲ್ಲಿ ಇವರೆಲ್ಲರ ವಿಚಾರಣೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...