
90ರ ದಶಕದಲ್ಲಿ ಬಾಲಿವುಡ್ ಸಿನಿಮಾಗಳನ್ನು ಯಾರೇ ನೋಡಿದ್ದರೂ ನಟ ಗೋವಿಂದ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಹಾಸ್ಯ ನಟನೆ, ವಿಭಿನ್ನ ಡ್ರೆಸ್ಸಿಂಗ್ ಹಾಗೂ ವಿಭಿನ್ನ ರೀತಿಯ ನೃತ್ಯ ಭಾರಿ ಫೇಮಸ್ ಆಗಿತ್ತು. ಆದರೆ ಇಂದಿನ ಸಮಯದಲ್ಲಿಯೂ ಆತನ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಗೋವಿಂದ ಅವರು ಇತ್ತೀಚಿನ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳದಿದ್ದರೂ, ಇಂದಿನ ಮಕ್ಕಳಿಗೂ ಅವರ ನೃತ್ಯದ ಸ್ಟೆಪ್‌ಗಳು ಇಷ್ಟವಾಗುತ್ತಿವೆ. ಇದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಗೋವಿಂದ ಅವರ ರೀತಿಯಲ್ಲಿ ನೃತ್ಯ ಮಾಡುತ್ತಿದ್ದ ಅಂಕಲ್ ಒಬ್ಬರು ಕೆಲ ವರ್ಷಗಳ ಹಿಂದೆ ಭಾರಿ ಫೇಮಸ್ ಆಗಿದ್ದರು. ಆದರೀಗ ಈ ಅಂಕಲ್ ಜತೆ ಬಾಲಕನೂ ಗೋವಿಂದ ಅವರ ಸ್ಟೆಪ್ ನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.
ಮನೋಜ್ ಎನ್ನುವವರು ಟ್ವೀಟ್‌ನಲ್ಲಿ ಹಾಕಿರುವ ವಿಡಿಯೊವನ್ನು ನೋಡಿದ ನೆಟ್ಟಿಗರು, ಬಾಲಿವುಡ್ ನಟ ಗೋವಿಂದ ಅವರ ರೀತಿಯಲ್ಲಿಯೇ ಡಾನ್ಸ್ ಮಾಡಿದ್ದಾನೆ ಎಂದಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಸುಮಾರು 1.15 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮಧ್ಯಪ್ರದೇಶದ 46 ವರ್ಷದ ವ್ಯಕ್ತಿ ರಾತ್ರೋರಾತ್ರಿ ಫೇಮಸ್ ಆದ ರೀತಿಯಲ್ಲಿಯೇ, ಈ ಬಾಲಕನೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾನೆ.