ಕೋವಿಡ್ -19 ರೋಗಿಗಳಿಗೆ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುವ ಮೂಲಕ ಬೆಳಕಿಗೆ ಬಂದಿದ್ದ ನಟಿ ಶಿಖಾ ಮಲ್ಹೋತ್ರಾ ಕೊರೊನಾಗೆ ತುತ್ತಾಗಿದ್ದಾರೆ. ಕಳೆದ 6 ತಿಂಗಳಿಂದ ಶಿಖಾ, ಕೊರೊನಾ ರೋಗಿಗಳ ಸೇವೆ ಮಾಡ್ತಿದ್ದರು. ಗುರುವಾರ ಶಿಖಾ ಟ್ವಿಟರ್ ನಲ್ಲಿ ಕೊರೊನಾ ಪಾಸಿಟಿವ್ ಆಗಿರುವ ವಿಷ್ಯ ತಿಳಿಸಿದ್ದಾರೆ.
ಎರಡು ಫೋಟೋಗಳನ್ನು ಹಂಚಿಕೊಂಡಿರುವ ಶಿಖಾ, ಕೊರೊನಾ ಪರೀಕ್ಷಾ ವರದಿ ಸಕಾರಾತ್ಮಕವಾಗಿ ಬಂದಿದೆ. ಈಗ ಆಮ್ಲಜನಕದ ಕೊರತೆ ಕಾಣಿಸುತ್ತಿದೆ. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಕೊರೊನಾ ಏನು ಅಲ್ಲ ಎನ್ನುತ್ತಿದ್ದವರಿಗೆ ಈ ಪೋಸ್ಟ್. ನಿಮ್ಮೆಲ್ಲರ ಆಶೀರ್ವಾದದಿಂದ, ಪ್ರಾರ್ಥನೆಯಿಂದ 6 ತಿಂಗಳಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿದ್ದೇನೆಂದು ಶಿಖಾ ಬರೆದುಕೊಂಡಿದ್ದಾರೆ.
ಒಂದು ಫೋಟೋದಲ್ಲಿ ಶಿಖಾ ಆಸ್ಪತ್ರೆ ಬೆಡ್ ಮೇಲಿದ್ದಾರೆ. ಇನ್ನೊಂದು ಫೋಟೋದಲ್ಲಿ ಶಿಖಾ ಪಿಪಿಇ ಕಿಟ್ ಧರಿಸಿದ್ದಾರೆ. ಮುಂಬೈನಲ್ಲಿ ಶಿಖಾ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸ್ವಯಂಸೇವಕಿ ರೂಪದಲ್ಲಿ ಕೆಲಸ ಮಾಡ್ತಿದ್ದರು.