alex Certify ಜಾತಿ ನಿಂದನೆ ಪ್ರಕರಣದಲ್ಲಿ ಖ್ಯಾತ ನಟಿ ಅರೆಸ್ಟ್: ಬಂಧನ ವೇಳೆ ಪೊಲೀಸರು ಕಿರುಕುಳ ನೀಡಿದ್ರು ಎಂದ ನಟಿ ಮೀರಾ ಮಿಥುನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಿ ನಿಂದನೆ ಪ್ರಕರಣದಲ್ಲಿ ಖ್ಯಾತ ನಟಿ ಅರೆಸ್ಟ್: ಬಂಧನ ವೇಳೆ ಪೊಲೀಸರು ಕಿರುಕುಳ ನೀಡಿದ್ರು ಎಂದ ನಟಿ ಮೀರಾ ಮಿಥುನ್

ತಿರುವನಂತಪುರಂ: ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿದ ತಮಿಳು ನಟಿ ಮೀರಾ ಮಿಥುನ್ ಅವರನ್ನು ಕೇರಳದಲ್ಲಿ ತಮಿಳುನಾಡು ಪೊಲೀಸರ ಸೈಬರ್ ಅಪರಾಧ ವಿಭಾಗ ಬಂಧಿಸಿದೆ.

ಆಗಸ್ಟ್ 12 ರಂದು ಪೊಲೀಸರ ಮುಂದೆ ಹಾಜರಾಗಲು ವಿಫಲವಾದ ನಂತರ ಮಿಥುನ್ ನನ್ನು ಬಂಧಿಸಲಾಯಿತು.

ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ಹಾಗೂ ಮಾಜಿ ಸಂಸದೆ ವನ್ನಿ ಅರಸು ನೀಡಿದ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನೆ ಫ್ರಂಟ್ ಕೂಡ ಮಿಥುನ್ ವಿರುದ್ಧ ದೂರು ದಾಖಲಿಸಿತ್ತು.

ಅವರು ಟ್ವಿಟ್ಟರ್ ವಿಡಿಯೋದಲ್ಲಿ ಮಾಡಿದ ಜಾತಿವಾದಿ ಟೀಕೆಗಳಿಗಾಗಿ ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯ 7 ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.

ವೀಡಿಯೊದಲ್ಲಿ ಮೀರಾ ಹೇಳುವಂತೆ, ನಾನು ಎಸ್ಸಿ ಸಮುದಾಯದ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿಲ್ಲ. ಆದಾಗ್ಯೂ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗಿರುವುದರಿಂದ ಸಮುದಾಯದ ಸದಸ್ಯರು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದಿದ್ದರು.

ಚಲನಚಿತ್ರ ಉದ್ಯಮದಲ್ಲಿ ಎಸ್‌ಸಿ ನಿರ್ದೇಶಕರು ಮತ್ತು ಸಮುದಾಯದ ಇತರ ಜನರು ಚೀಪ್ ಕೆಲಸಗಳನ್ನು ಮಾಡುತ್ತಾರೆ. ಎಲ್ಲಾ ಎಸ್‌ಸಿ ನಿರ್ದೇಶಕರು ಮತ್ತು ಚಲನಚಿತ್ರೋದ್ಯಮದ ಇತರ ಜನರನ್ನು ಹೊರಹಾಕುವ ಸಮಯ ಇದು ಎಂದು ಅವರು ಹೇಳಿದ್ದರೆನ್ನಲಾಗಿದೆ.

ವಿಸಿಕೆ ಮುಖ್ಯಸ್ಥ ಮತ್ತು ಸಂಸದ ತೋಳ್ ತಿರುವಮವಲವನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿ ಮತ್ತು ಆಕೆಯ ಸಂದರ್ಶಕರನ್ನು ಪೊಲೀಸರು ಬಂಧಿಸಬೇಕು ಎಂದು ಹೇಳಿದ್ದಾರೆ.

ಮೀರಾಳನ್ನು ಬಂಧಿಸುವ ಮೊದಲು ತೆಗೆದ ವಿಡಿಯೊದಲ್ಲಿ, ಉದ್ದೇಶಪೂರ್ವಕವಾಗಿ ಕಿರುಚಾಡಿ ತನಗೆ ಚಿತ್ರಹಿಂಸೆ ನೀಡಲಾಗಿದೆ. ಕ್ಯಾಮೆರಾ ಮುಂದೆ ಕಿರುಚಾಡಿ, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...