ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ದಿನ ಸಂಜನಾ ಅವರ ಸಹೋದರಿ ನಿಕ್ಕಿ ಗರ್ಲಾನಿ ಮತ್ತು ನಟ ಆದಿ ಪಿನಿಶೆಟ್ಟಿ ಅವರ ಮದುವೆ ನೆರವೇರಿದೆ.
2020 ರ ಮೇನಲ್ಲಿ ಡಾ. ಅಜೀಜ್ ಪಾಷ ಅವರೊಂದಿಗೆ ಸಂಜನಾ ಗರ್ಲಾನಿ ಮದುವೆ ನೆರವೇರಿತ್ತು. ಇಂದು ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಇದೇ ದಿನವೇ ಸೋದರಿ ಮದುವೆಯಾಗಿದ್ದು, ಕುಟುಂಬದ ಸಂಭ್ರಮ ಹೆಚ್ಚಿಸಿದೆ.
‘ಗಂಡ ಹೆಂಡತಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸಂಜನಾ ಗರ್ಲಾನಿ ಕನ್ನಡ ಮಾತ್ರವಲ್ಲದೆ ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.