ಪಂಜಾಬ್ ಮೂಲದ ಹಿರಿಯ ನಟ ರವಿ ಚೋಪ್ರಾ ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದು,ಅವರ ಅಂತಿಮ ದಿನಗಳಲ್ಲಿ ಊಟಕ್ಕೂ ಪರದಾಡಿದ ಘಟನೆ ನಡೆದಿದೆ.
ಹೌದು, 70 ವರ್ಷದ ರವಿ ಚೋಪ್ರಾ ಅವರು ಮೃತಪಟ್ಟಿದ್ದು, ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಅವರು ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಅಂತಿಮ ದಿನದಲ್ಲಿ ಕ್ಯಾನ್ಸರ್ ಉಲ್ಭಣಗೊಂಡಾಗ ತುತ್ತು ಊಟಕ್ಕೆ ದೇವಾಲಯ ಹಾಗೂ ಗುರುದ್ವಾರದಲ್ಲಿ ಆಹಾರ ಸೇವಿಸುತ್ತಿದ್ದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು.
1972ರಲ್ಲಿ ತೆರೆಕಂಡ ಮೊಮಿ ಕೀ ಗುಡಿಯಾ ಚಿತ್ರದಲ್ಲಿ ನಟಿಸಿದ್ದ ಅವರು, ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರ ಕುಟುಂಬದಲ್ಲಿ ಅವರು ಚಿತ್ರದಲ್ಲಿ ನಟಿಸುವುದು ಇಷ್ಟವಿಲ್ಲದ ಕಾರಣ ಈ ನಿರ್ಧಾರ ಮಾಡಿದರಂತೆ.
ಪಂಜಾಬ್ ವಾಪಸಾದ ಬಳಿಕ ಹಲವು ಚಿತ್ರಗಳಿಗೆ ಆಫರ್ ಬಂದರೂ ಅವನ್ನು ನಿರಾಕರಿಸಿದ್ದರಂತೆ. ಅವರು ನಿರಾಕರಿಸಿದ ಚಿತ್ರಗಳಲ್ಲಿ ಲೋಫರ್, ಆಯಾ ಸಾವನ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳ ಅವಕಾಶ ಕಳೆದುಕೊಂಡಿದ್ದಾರೆ. ಇವರು ನಿರಾಕರಿಸಿದ ಚಿತ್ರಗಳಿಗೆ ಪಂಜಾಬ್ ನವರೇ ಆದ ಧರ್ಮೇಂದ್ರ ಅವಕಾಶ ಪಡೆದುಕೊಂಡರಂತೆ.