![Actor Ramy Youssef's Hilarious Video Shows What Happens When You Lose an Emmy in 2020](https://images.news18.com/ibnlive/uploads/2020/09/1600765368_untitled-design-38.jpg)
ಎಲ್ಲ ವಿಷಯಗಳನ್ನೂ ಹಾಸ್ಯಮಯವಾಗಿ ಮಾಡುವ ಶಕ್ತಿಯನ್ನು ನಟ ರೆಮಿ ಯುಸೆಫ್ ಹೊಂದಿದ್ದಾರೆ. ಈ ವರ್ಷದ ಪ್ರತಿಷ್ಠಿತ ಎಮ್ಮಿ ಅವಾರ್ಡ್ ತಪ್ಪಿದ್ದನ್ನೂ ಅವರು ಒಂದು ಹಾಸ್ಯಮಯ ಕ್ಲಿಪ್ ಮೂಲಕ ಹಂಚಿಕೊಂಡಿದ್ದಾರೆ.
ಕಾಮಿಡಿ ಸಿರೀಸ್ ನ ಉತ್ತಮ ನಟರ ವಿಭಾಗದಲ್ಲಿ 2020 ರ ಎಮ್ಮಿ ಅವಾರ್ಡ್ ಗೆ ರೆಮಿ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಅವರು, ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದಾರೆ. ಅದೇ ವಿಷಯವನ್ನಿಟ್ಟುಕೊಂಡು ಜನ ನಗುವಂತೆ ಮಾಡಿದ್ದಾರೆ.
ಇಡೀ ದೇಹವನ್ನು ಮುಚ್ಚುವಂತೆ ಗಗನಯಾನಿಗಳು ಬಳಸುವ ಟುಕ್ಸೆಡೊ ಹಜಮತ್ ಸೂಟ್ ಧರಿಸಿದ ವ್ಯಕ್ತಿ ಎಮ್ಮಿ ಅವಾರ್ಡ್ ಶೀಲ್ಡ್ ಹಿಡಿದು ಕಿಟಕಿಯ ಹೊರಗೆ ನಿಂತಿರುವ ವಿಡಿಯೋ ಕ್ಲಿಪ್ ಇದಾಗಿದೆ. ಸೂಟ್ ಧರಿಸಿದ ವ್ಯಕ್ತಿ ಕಿಟಕಿಯಿಂದಲೇ ಅದನ್ನು ತೋರಿಸಿ ವಾಪಸಾಗುತ್ತಾನೆ. ಮಹಿಳೆಯೊಬ್ಬಳು ಅದನ್ನು ನೋಡಿ ನಗುವ ಆಡಿಯೋ ಕೂಡ ಕ್ಲಿಪ್‌ನಲ್ಲಿದೆ. ಟ್ವಿಟ್ಟರ್ ನಲ್ಲೆ ರೆಮಿ ಹಂಚಿಕೊಂಡ ವಿಡಿಯೋ 7.5 ಲಕ್ಷ ಜನ ವೀಕ್ಷಿಸಿದ್ದು, 207 ಸಾವಿರ ಜನ ಲೈಕ್ ಮಾಡಿದ್ದಾರೆ.