
ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಎಲ್ಲರ ಅಚ್ಚುಮೆಚ್ಚಿನ ಪುಟಾಣಿ. ಸದಾ ಅಮ್ಮನ ಕೈ ಹಿಡಿದೇ ಮುಂದೆ ಸಾಗುವ ಆರಾಧ್ಯ ತನ್ನ ತಾತನಿಗೆ ಪ್ರಿಯವಾದ ಮೊಮ್ಮಗಳು. ಸ್ಟಾರ್ ಕುಟುಂಬದಿಂದ ಬಂದ ಆರಾಧ್ಯ ಡಾನ್ಸ್ ನಲ್ಲೂ ಮುಂದಿದ್ದಾಳೆ. ಆರಾಧ್ಯ ಒಮ್ಮೆ ಅಭಿಷೇಕ್ ಬಚ್ಚನ್ ಬಿಟ್ಟು ಇನ್ಯಾರನ್ನೋ ಅಪ್ಪ ಎಂದಿದ್ದಳಂತೆ.
ಹೌದು, ಏ ದಿಲ್ ಹೇ ಮುಷ್ಕಿಲ್ ಸಿನಿಮಾದ ಶೂಟಿಂಗ್ ವೇಳೆ ರಣಬೀರ್ ನೋಡಿದ ಆರಾಧ್ಯ ಅವರನ್ನೇ ಅಪ್ಪ ಅಂದಿದ್ದಳಂತೆ. ಅಭಿಷೇಕ್ ರೀತಿಯ ಜಾಕೆಟ್, ಟೋಪಿ ಹಾಕಿಕೊಂಡಿದ್ದೇ ಇಲ್ಲಿ ಆದ ಎಡವಟ್ಟು. ಅಷ್ಟೆ ಅಲ್ಲ ಅವರ ರೀತಿಯಲ್ಲೇ ಸ್ಟಿಕ್ ಕೂಡ ಹಿಡಿದುಕೊಂಡಿದ್ದರು ರಣಬೀರ್. ಇದನ್ನು ನೋಡಿದ ಆರಾಧ್ಯ ಅವರೇ ನಮ್ಮ ಅಪ್ಪ ಎಂದುಕೊಂಡವಳೇ ರಣಬೀರ್ ಕಡೆ ಹೋಗಿ ಅಪ್ಪ ಎಂದು ಅಪ್ಪಿಕೊಂಡಿದ್ದಳಂತೆ. ಇನ್ನು ಇದಕ್ಕೆ ರಣಬೀರ್ ಆಗ ಖುಷಿ ವ್ಯಕ್ತಪಡಿಸಿದ್ದರಂತೆ
ಇನ್ನು ಇಂದಿಗೂ ಆರಾಧ್ಯ ರಣಬೀರ್ ನೋಡಿದರೆ ನಾಚಿಕೊಳ್ಳುತ್ತಾಳಂತೆ. ಫಿಲ್ಮ್‌ಫೇರ್ ಸಂದರ್ಶನವೊಂದರಲ್ಲಿ ಸಿನಿಮಾ ಹಾಗೂ ಅಲ್ಲಿ ನಡೆದ ಘಟನೆ ಬಗ್ಗೆ ಐಶ್ವರ್ಯ ಮಾತನಾಡಿದ್ದಾರೆ. ಆಗ ಮಗಳ ಈ ಘಟನೆ ನೆನಪಿಸಿಕೊಂಡಿದ್ದಾರೆ.