alex Certify BIG NEWS: ಶೂಟಿಂಗ್​ ಮಧ್ಯದಲ್ಲೇ‌ ನಟ ರಾಹುಲ್‌ ಗೆ ಬ್ರೈನ್‌ ಸ್ಟ್ರೋಕ್ – ಐಸಿಯುವಿನಲ್ಲಿ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೂಟಿಂಗ್​ ಮಧ್ಯದಲ್ಲೇ‌ ನಟ ರಾಹುಲ್‌ ಗೆ ಬ್ರೈನ್‌ ಸ್ಟ್ರೋಕ್ – ಐಸಿಯುವಿನಲ್ಲಿ ಚಿಕಿತ್ಸೆ

1990ರಲ್ಲಿ ಬಾಲಿವುಡ್​ನ ಸಿಕ್ಕಾಪಟ್ಟೆ ಸೌಂಡ್​ ಮಾಡಿದ್ದ ಮಹೇಶ್​ ಭಟ್​ ನಿರ್ದೇಶನದ ವಿತ್ರ ʼಆಶಿಖಿʼಯ ಸ್ಟಾರ್​ ನಟ ರಾಹುಲ್​ ರಾಯ್​​ ತಮ್ಮ ಇನ್ನೊಂದು ಸಿನಿಮಾದ ಶೂಟಿಂಗ್​ ಭಾಗಿಯಾಗಿದ್ದ ವೇಳೆ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.

52 ವರ್ಷದ ಈ ನಟನನ್ನ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಹುಲ್​ ರಾಯ್​ ಸ್ಥಿತಿ ಗಂಭೀರವಾಗಿದ್ದು ಐಸಿಯುವಿನಲ್ಲಿ ಇಡಲಾಗಿದೆ.

ಎಲ್​ಎಸಿ ಸಿನಿಮಾ ಶೂಟಿಂಗ್​​ಗಾಗಿ ರಾಹುಲ್​ ರಾಯ್​ ಹಾಗೂ ಬಿಗ್​ಬಾಸ್​ 14ರ ಸ್ಪರ್ಧಿ ನಿಶಾಂತ್​ ಸಿಂಗ್​ ಮಲ್ಖಾನಿ ಕಾರ್ಗಿಲ್​ಗೆ ತೆರಳಿದ್ದರು. ಕಾರ್ಗಿಲ್​​ನಲ್ಲಿ ಅತೀ ಚಳಿ ಇದ್ದಿದ್ದರಿಂದ ಈ ರೀತಿ ಆಗಿದೆ ಅಂತಾ ನಾನಾವತಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ರಾಹುಲ್​ ಸಹೋದರ ರೋಮೀರ್​​, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ.

ನಿತಿನ್​ ಕುಮಾರ್​ ನಿರ್ದೇಶನದ ಈ ಸಿನಿಮಾದಲ್ಲಿ ರಾಹುಲ್​ ರಾಯ್​ ಕರ್ನಲ್​ ಪಾತ್ರ ನಿರ್ವಹಿಸುತ್ತಿದ್ದರು. ನಿಶಾಂತ್​ ಸಿಂಗ್​ ಮಲ್ಖಾನಿ ಚಿತ್ರದ ನಾಯಕನಾಗಿ ಪಾತ್ರ ವಹಿಸಿದ್ದಾರೆ. ಕಾರ್ಗಿಲ್​​ನಲ್ಲಿ 17 ದಿನಗಳ ಶೂಟಿಂಗ್​ ನಡೆಯುವುದಿತ್ತು. ಆದರೆ ಶೂಟಿಂಗ್​ ಮಧ್ಯದಲ್ಲೇ ಈ ಅವಘಡ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...