
ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಅಮೀರ್ ಖಾನ್. ಅಮೀರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಶೀಘ್ರವೇ ತೆರೆಗೆ ಬರಲಿದೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ಅಮೀರ್ ಖಾನ್ ಅಭಿಮಾನಿಗಳನ್ನು ದಂಗು ಬಡಿಸಿದ್ದಾರೆ. ಯಾವಾಗ್ಲೂ ಹೊಸದನ್ನು ಮಾಡುವ ಅಮೀರ್ ಖಾನ್, ಲಾಲ್ ಸಿಂಗ್ ಚಡ್ಡಾ ಚಿತ್ರ ತೆರೆಗೆ ಬರುವವರೆಗೂ ಮೊಬೈಲ್ ಬಳಕೆ ಮಾಡುವುದಿಲ್ಲ ಎಂದಿದ್ದಾರೆ.
ಪ್ರತಿಯೊಬ್ಬರ ಮೂಲಭೂತ ಅಗತ್ಯಗಳಲ್ಲಿ ಮೊಬೈಲ್ ಒಂದಾಗಿದೆ. ಮೊಬೈಲ್ ಇಲ್ಲದೆ ಅರೆ ಕ್ಷಣ ಇರುವುದಿಲ್ಲ ಎನ್ನುವವರಿದ್ದಾರೆ. ಇಂಥವರ ಮಧ್ಯೆ ಅಮೀರ್ ಖಾನ್ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದೆ. ಅಮೀರ್ ಖಾನ್ ಚಿತ್ರ ಬಿಡುಗಡೆಯವರೆಗೂ ಮೊಬೈಲ್ ಮುಟ್ಟದಿರುವ ನಿರ್ಧಾರಕ್ಕೆ ಬರಲು ಕಾರಣವಿದೆ. ಮೊಬೈಲ್ ಅವ್ರ ಕೆಲಸಕ್ಕೆ ಅಡ್ಡಿ ಮಾಡ್ತಿದೆಯಂತೆ.
ಗೋಡ್ಸೆ ಹೊಗಳಿದ ಕಂಗನಾ: ನಟಿ ಕಾಲೆಳೆದ ನೆಟ್ಟಿಗರು
ಕೆಲಸಕ್ಕೆ ಹೆಚ್ಚು ಮಹತ್ವ ನೀಡುವ ಅಮೀರ್ ಖಾನ್, ಕೆಲಸಕ್ಕೆ ಅಡ್ಡಿ ಮಾಡಲು ಇಷ್ಟಪಡುವುದಿಲ್ಲ. ಲಾಲ್ ಸಿಂಗ್ ಚಡ್ಡಾಗೆ ಸಂಪೂರ್ಣ ಸಮಯ ನೀಡಲು ಅಮೀರ್ ಬಯಸಿದ್ದಾರೆ. ಅಮೀರ್ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅಮೀರ್ ಚಿತ್ರ ಕ್ರಿಸ್ಮಸ್ ಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ಕರೀನಾ ಕಪೂರ್ ನಟಿಸಿದ್ದಾರೆ. ಅಮೀರ್-ಕರೀನಾ ಈ ಹಿಂದೆ 3 ಈಡಿಯಟ್ಸ್ ನಲ್ಲಿ ನಟಿಸಿದ್ದರು.