ಬಾಲಿವುಡ್ ನಟ ಅಮಿತಾ ಬಚ್ಚನ್ ಹಾಗೂ ನಟಿ ಜಯಾ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ ಸಿನಿಮಾಗಳಿಂದ ದೂರವಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಆಗಾಗ ಚರ್ಚೆಗೆ ಬರ್ತಿರುತ್ತಾರೆ. ಶ್ವೇತಾ ಬಗ್ಗೆ ಸಹೋದರ ಅಭಿಷೇಕ್ ಬಚ್ಚನ್ ಕೆಲ ಆಸಕ್ತಿಕರ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ.
ಶ್ವೇತಾ, ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅಭಿಮಾನಿಯಾಗಿದ್ದರಂತೆ. ಶ್ವೇತಾ ಬೋರ್ಡಿಂಗ್ ಸ್ಕೂಲಿನಲ್ಲಿರುವಾಗ ಮೆಯ್ನೆ ಪ್ಯಾರ್ ಕಿಯಾ ಚಿತ್ರ ತೆರೆಗೆ ಬಂದಿತ್ತಂತೆ. ಸ್ಕೂಲಿನಲ್ಲಿ ಸಿನಿಮಾ ನೋಡಲು ಅನುಮತಿ ಇಲ್ಲದ ಕಾರಣ ಟೇಪ್ ರೆಕಾರ್ಡ್ ನಲ್ಲಿ ಸಿನಿಮಾ ಕೇಳುತ್ತಿದ್ದರಂತೆ. ಕೆಲ ದಿನಗಳ ನಂತ್ರ ಸಿನಿಮಾ ನೋಡಿದ್ದ ಶ್ವೇತಾ, ಫ್ರೆಂಡ್ಸ್ ಕ್ಯಾಪ್ ತರಿಸಿಕೊಂಡಿದ್ದರಂತೆ.
ಶ್ವೇತಾ ತನ್ನ ಅಭಿಮಾನಿ ಎಂಬುದು ಗೊತ್ತಾದ್ಮೇಲೆ ಅಮೀರ್ ಖಾನ್ ಪತ್ರ ಬರೆಯಲು ಶುರು ಮಾಡಿದ್ದರಂತೆ. ಶ್ವೇತಾ ಹುಟ್ಟುಹಬ್ಬಕ್ಕೆ ಅಮೀರ್ ಖಾನ್ ಪತ್ರ ಬರೆಯುತ್ತಿದ್ದರಂತೆ. ಅಮೀರ್ ಹಾಗೂ ಶ್ವೇತಾ ಹುಟ್ಟುಹಬ್ಬ ಒಂದೇ ತಿಂಗಳಿನಲ್ಲಿ ಬರುತ್ತದೆ. ಇದು ಕೂಡ ಶ್ವೇತಾಗೆ ಖುಷಿ ನೀಡುತ್ತಿತ್ತು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಶ್ವೇತಾ ಹುಟ್ಟುಹಬ್ಬ ಮಾರ್ಚ್ 17ಕ್ಕಾದರೆ ಅಮೀರ್ ಹುಟ್ಟುಹಬ್ಬ ಮಾರ್ಚ್ 14.