ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಈ ಕೂಗಿಗೆ ತಾವೂ ದನಿಯಾಗಿರುವ ಕಂಗನಾ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, “ನಾವು ಈ ಸಮಯದಲ್ಲಿ ಒಟ್ಟಾಗಿ ನಿಲ್ಲಬೇಕಿದ್ದು, ಚೀನಾ ವಿರುದ್ಧದ ಈ ಯುದ್ಧದಲ್ಲಿ ಒಗ್ಗಟ್ಟಾಗಿ ಹೋರಾಡಬೇಕಿದೆ” ಎಂದಿದ್ದಾರೆ.
ಸ್ವತಂತ್ರ‍್ಯ ಹೋರಾಟದ ವೇಳೆ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಲು ಮಹಾತ್ಮಾ ಗಾಂಧಿ ನೀಡಿದ್ದ ಕರೆಯನ್ನು ಉಲ್ಲೇಖಿಸಿರುವ ಕಂಗನಾ, “ನಮ್ಮ ಸೇನೆಗೆ ಸರ್ಕಾರದೊಂದಿಗೆ ನಾವೂ ಸಹ ಬೆಂಬಲ ನೀಡುವುದು ನಮ್ಮ ಕರ್ತವ್ಯ ಅಲ್ಲವೇ? ನಾವು ಆತ್ಮನಿರ್ಭರರಾಗಿ, ಚೀನೀ ಸರಕುಗಳನ್ನು ಸಂಪೂರ್ಣ ಬಹಿಷ್ಕರಿಸಿ, ಈ ಯುದ್ಧದಲ್ಲಿ ಹೋರಾಡಿ ಭಾರತವನ್ನು ಗೆಲ್ಲಿಸೋಣ ಎಂದು ಶಪಥಗೈಯ್ಯೋಣ” ಎಂದು ಹೇಳಿಕೊಂಡಿದ್ದಾರೆ.
https://www.instagram.com/tv/CB7Kg8ElU27/?utm_source=ig_embed