ರಶ್ಮಿಕಾರನ್ನ ಭೇಟಿಯಾಗಲು ವಿರಾಜಪೇಟೆಗೆ ಬಂದ ನೆರೆ ರಾಜ್ಯದ ಅಭಿಮಾನಿ..! 22-06-2021 11:33AM IST / No Comments / Posted In: Featured News, Entertainment ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ತಮ್ಮದೇ ಛಾಪನ್ನ ಮೂಡಿಸುತ್ತಿದ್ದಾರೆ. ತಮ್ಮ ಮುದ್ದಾದ ನಟನೆಯ ಮೂಲಕ ನಟಿ ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ನಿದ್ದೆಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಟಿ ರಶ್ಮಿಕಾ ವಿರಾಜಪೇಟೆ ಮೂಲದವರು ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಹೀಗಾಗಿ ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬಾತ ತನ್ನ ನೆಚ್ಚಿನ ನಟಿಯ ಮನೆಯನ್ನ ಹುಡುಕುತ್ತಾ ಡೈರೆಕ್ಟ್ ವಿರಾಜಪೇಟೆಗೆ ಎಂಟ್ರಿ ಕೊಟ್ಟಿದ್ದಾನೆ..! ಮಾತ್ರವಲ್ಲದೇ ರಾತ್ರಿಪೂರ್ತಿ ವಿರಾಜಪೇಟೆಯಲ್ಲಿ ರಶ್ಮಿಕಾ ಮನೆಗಾಗಿ ಹುಡುಕಾಡಿದ್ದಾನಂತೆ..! ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿ ಸ್ಥಳೀಯರ ಬಳಿ ರಶ್ಮಿಕಾ ಮನೆಯ ಬಗ್ಗೆ ವಿಚಾರಿಸಿದ್ದಾನಂತೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಕಾಶ್ನನ್ನ ವಶಕ್ಕೆ ಪಡೆದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.