ಚೆನ್ನೈ: ‘ಬಾಹುಬಲಿ’ ಶಿವಗಾಮಿ ಖ್ಯಾತಿಯ ನಟಿ ರಮ್ಯಾಕೃಷ್ಣ ಅವರ ಕಾರ್ ನಲ್ಲಿ ಸಾಗಿಸುತ್ತಿದ್ದ 96 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊರೊನಾ ಸೋಂಕು ತಮಿಳುನಾಡಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ವಲಯದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಶುಕ್ರವಾರ ರಾತ್ರಿ ಪುದುಚೇರಿಯಿಂದ ಚೆನ್ನೈಗೆ ತೆರಳುತ್ತಿದ್ದ ನಟಿ ರಮ್ಯಾಕೃಷ್ಣ ಅವರ ಕಾರ್ ಅನ್ನು ಮುತ್ತುಕಾಡು ಚೆಕ್ಪೋಸ್ಟ್ ಸಮೀಪ ತಪಾಸಣೆ ಮಾಡಿದ ವೇಳೆ 96 ಮದ್ಯದ ಬಾಟಲಿ ಕಂಡುಬಂದಿದ್ದು ಜಪ್ತಿ ಮಾಡಲಾಗಿದೆ.
ಕಾರ್ ಚಾಲಕ 38 ವರ್ಷದ ಸೆಲ್ವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕನ ಬಂಧನವಾದ ಕೆಲವು ಗಂಟೆಗಳ ಅವಧಿಯಲ್ಲಿ ನಟಿ ರಮ್ಯಾಕೃಷ್ಣ ಅವರು ಜಾಮೀನು ಸಹಿತ ಖುದ್ದಾಗಿ ಪೊಲೀಸ್ ಠಾಣೆಗೆ ಆಗಮಿಸಿ ಚಾಲಕನನ್ನು ಬಿಡುಗಡೆ ಮಾಡಿಸಿಕೊಂಡು ತೆರಳಿದ್ದಾರೆ.