
ಶಿವಕಾರ್ತಿಕ್ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ಪಟಾಕಿ ಪೋರಿಯೋ ಎಂಬ ಲಿರಿಕಲ್ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದರು. ಈ ಹಾಡು ಇದೀಗ 5 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಕಿಚ್ಚ ಸುದೀಪ್ ಹಾಗೂ ಆಶಿಕಾ ರಂಗನಾಥ್ ಈ ಹಾಡಿಗೆ ಸ್ಟೆಪ್ ಹಾಕಿದ್ದು ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಈ ಹಾಡಿಗೆ ಧ್ವನಿಯಾಗಿದ್ದರು.