ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 29 ದಿನಗಳ ನಂತ್ರ ಆಸ್ಪತ್ರೆಯಿಂದ ಮನೆಗೆ ಬರುವ ತಯಾರಿ ನಡೆಸಿದ್ದಾರೆ. ಜುಲೈ 11ರಂದು ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಅಭಿಷೇಕ್ ಬಚ್ಚನ್ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.
ಸತತ 29 ದಿನಗಳ ನಂತ್ರ ಅಭಿಷೇಕ್ ಬಚ್ಚನ್ ಮನೆಗೆ ವಾಪಸ್ ಆಗಲು ಸಿದ್ಧವಾಗಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ಮೇಲೆ ಅಭಿಷೇಕ್ ಬಚ್ಚನ್ ಈ ಖುಷಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಿದೆ. ನನ್ನ ಆರೋಗ್ಯಕ್ಕೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ. ಮನೆಗೆ ವಾಪಸ್ ಬರಲು ಅವಕಾಶ ಸಿಕ್ಕಿದ್ದು, ನನಗೆ ಖುಷಿಯಾಗ್ತಿದೆ ಎಂದು ಅಭಿಷೇಕ್ ಬರೆದಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದವರನ್ನು ಚೆನ್ನಾಗಿ ನೋಡಿಕೊಂಡ ನಾನಾವತಿ ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞನಾಗಿದ್ದೇನೆಂದು ಅಭಿಷೇಕ್ ಹೇಳಿದ್ದಾರೆ.