![5 unforgettable characters played by South star Sai Pallavi | Vogue India](https://assets.vogue.in/photos/5e71cd6abc37e00008216e0a/master/pass/Sai%20Pallavi%20Top%20movies.jpg)
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಾಯಿ ಪಲ್ಲವಿ 2005ರಂದು ‘ಕಸ್ತೂರಿ ಮಾನ್’ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
2015ರಂದು ‘ಪ್ರೇಮಂ’ ಎಂಬ ಮಲಯಾಳಂ ಸಿನಿಮಾದಲ್ಲಿ ಮೊದಲ ಬಾರಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ತೆಲುಗು, ಮಲಯಾಳಂ, ಹಾಗೂ ತಮಿಳು, ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ನಟಿ ಸಾಯಿ ಪಲ್ಲವಿ ಅವರಿಗೆ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಲೇ ಇವೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರು ಸಾಯಿಪಲ್ಲವಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.