
ಎರಡೂವರೆ ದಶಕದ ಹಿಂದೆ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ʼಬರ್ಸಾತ್ʼ ಚಿತ್ರಕ್ಕೆ ಈಗ ಬೆಳ್ಳಿಹಬ್ಬದ ಸಡಗರ. 1995 ರಲ್ಲಿ ಬಿಡುಗಡೆಯಾದ ಬರ್ಸಾತ್ 25 ವಸಂತ ಕಳೆದಿದೆ.
ಈ ಖುಷಿಯನ್ನು ಹಂಚಿಕೊಂಡ ನಟ ಬಾಬಿ ಡಿಯೋಲ್, 25 ವರ್ಷಗಳನ್ನು ಚಲನಚಿತ್ರ ರಂಗದಲ್ಲಿ ಕಳೆದಿದ್ದೇನೆ. ನನ್ನ ಪ್ರಯಾಣ ಅಗಾಧ ಮತ್ತು ಭಾವನಾತ್ಮಕ ಅನುಭವ ಎಂದು ಹೆಮ್ಮೆಯಿಂದ ಹೇಳುತ್ತೇನೆ. 25 ವರ್ಷಗಳ ಅನುಭವದ ಪ್ರಕಾರ, ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು, ಪುಟಿದು ಮುಂದಕ್ಕೆ ಹೋಗುತ್ತಿರಬೇಕು…..ಎಂದು ಹೇಳಿಕೊಂಡಿದ್ದಾರೆ.
ಏತನ್ಮಧ್ಯೆ, ಬಾಬಿ ಡಿಯೋಲ್ ಜತೆ ನಟಿಸಿರುವ ಬರ್ಸಾತ್ ಚಿತ್ರದ ಮೂಲಕವೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಟ್ವಿಂಕಲ್ ಖನ್ನಾ ಕೂಡ ಬಾಬಿಯ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಂದರ್ಶನ ಮತ್ತು ನಂತರ ಈ ಟ್ವೀಟ್ ಗಮನಿಸಿದೆ. ಕಣ್ಣಲ್ಲಿ ನೀರೂರಿತು. ಒಟ್ಟಿಗೆ ಕೆಲಸ ಮಾಡಿದ ನಮ್ಮ ಹುಡುಗರು ನಮ್ಮಂತೆಯೇ ವಯಸ್ಸಾಗಿದ್ದಾರೆ ಎಂದು ಟ್ವಿಂಕಲ್ ಖನ್ನಾ ಬಾಬಿಯನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.