13 ವರ್ಷದ ಬಾಲಕ ಕಣ್ಣು ಮುಚ್ಚಿಕೊಂಡು 30 ನಿಮಿಷಗಳಲ್ಲಿ 20 ಹಾಡುಗಳ ಸಂಗೀತವನ್ನ ಕೀ ಬೋರ್ಡ್ನಲ್ಲಿ ನುಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಮೂಲಕ ಎ.ಎಸ್. ಹರಿಹರನ್ ನಾಯ್ಡು ವಂಡರ್ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರವೇಶ ಪಡೆದಿದ್ದಾರೆ.
ಹೈದರಾಬಾದ್ನ ಗೀತಾಂಜಲಿ ದೇವ್ಶಾಲಾದಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದ ಹರಿಹರನ್ ವಂಡರ್ ಬುಕ್ ಆಫ್ ರೆಕಾರ್ಡ್ಸ್ ನ ಜಡ್ಜ್ ಸಮ್ಮುಖದಲ್ಲಿ ಪ್ರದರ್ಶನ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಹರಿಹರನ್ 30 ನಿಮಿಷಗಳಲ್ಲಿ 20 ಹಾಡುಗಳನ್ನ ನುಡಿಸಿದ್ದಾರೆ. ವಾಸ್ತವವಾಗಿ ಅವರು ಈ ದಾಖಲೆ ಮಾಡಲು 29 ನಿಮಿಷ 19 ಸೆಕೆಂಡ್ಗಳನ್ನ ತೆಗೆದುಕೊಂಡಿದ್ದಾರೆ ಎಂದು ದಕ್ಷಿಣ ಭಾರತದ ವಂಡರ್ ಬುಕ್ ಆಫ್ ರೆಕಾರ್ಡ್ನ ಮುಖ್ಯ ಸಂಯೋಜಕರಾದ ಡಾ.ಜಿ. ಸ್ವರ್ಣ ಶ್ರೀ ಹೇಳಿದ್ರು.