ಚಂಡೀಗಡ: ಸ್ಕೇಟಿಂಗ್ ನಲ್ಲಿ ಬಾಂಗ್ರಾ ನೃತ್ಯ ಮಾಡುವ ಮೂಲಕ ಚಂಡೀಗಡದ 12 ವರ್ಷದ ಬಾಲಕಿ ಜಾನವಿ ಜಿಂದಾಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.
ಸ್ಕೇಟಿಂಗ್ ಸುಲಭದ ಆಟವಲ್ಲ. ಅದೂ ಕಾಲಿಗೆ ಸ್ಕೇಟ್ ಕಟ್ಟಿಕೊಂಡು ನೃತ್ಯ ಮಾಡಲು ಬ್ಯಾಲೆನ್ಸ್ ಬೇಕು. ಜಾನವಿ 2019 ರ ನ್ಯಾಷನಲ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾಗಿದ್ದಾರೆ.
ಜಾನವಿಯ ತಂದೆ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಆಕೆಗೆ ಸ್ಕೇಟಿಂಗ್ ರೂಢಿ ಮಾಡಿಸಿದ್ದಾರೆ. ಈಗ ಆಕೆ ಅದರಲ್ಲಿ ಪ್ರವೀಣಳಾಗಿಬಿಟ್ಟಿದ್ದಾಳೆ. ತನ್ನ 8ನೇ ವರ್ಷದಿಂದಲೇ ಸ್ಕೇಟಿಂಗ್ ಕಲಿಕೆ ಪ್ರಾರಂಭಿಸಿದ ಆಕೆ, ಪಂಜಾಬಿ ಶಿಕ್ಷಕರಿಂದ ಡಾನ್ಸ್ ಕೂಡ ಕಲಿತಿದ್ದಾಳೆ.
“ಮೊದಲು ನಾನು ತಂದೆಯಿಂದ ಕಲಿತೆ. ನಂತರ ಕೋರಿಯೋಗ್ರಾಫರ್ ಅವರಿಂದ ವಿಶೇಷ ತರಬೇತಿ ಪಡೆದೆ” ಎಂದು ಜಾನವಿ ಹೇಳಿದ್ದಾರೆ.