
ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷೆಯ ‘ಮದಗಜ’ ಸಿನಿಮಾ ತೆಲುಗು ವರ್ಷನ್ ಅನ್ನು ಹೊಸ ವರ್ಷದ ಪ್ರಯುಕ್ತ ರಿಲೀಸ್ ಮಾಡಿದ್ದರು. ಈ ಟೀಸರ್ ಇದೀಗ 1 ಮಿಲಿಯನ್ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಟಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದೆ.
ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.
ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ಟಾಲಿವುಡ್ ನ ಜಗಪತಿ ಬಾಬು ಈ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ.