![](https://kannadadunia.com/wp-content/uploads/2020/12/b986415d-510a-44ae-bad9-d328597b4e5b.jpg)
ಪಿವಿಆರ್ ಸ್ವಾಮಿ ನಿರ್ದೇಶನದ, ರಾಘವೇಂದ್ರ ರಾಜ್ ಕುಮಾರ್ ನಟನೆಯ ‘ರಾಜತಂತ್ರ’ ಸಿನಿಮಾವನ್ನು 2021 ಜನವರಿ 1ರಂದು ಹೊಸ ವರ್ಷದ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.
ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿವೃತ್ತ ಯೋಧನ ಪಾತ್ರದಲ್ಲಿ ಅಭಿನಯಿಸಿದ್ದು, ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಈ ಚಿತ್ರವನ್ನು ‘ವಿಶ್ವಂ ಡಿಜಿಟಲ್ ಮೀಡಿಯಾ’ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.