ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಸಿನಿಮಾ ಟೀಸರ್ ಅನ್ನು ಕಳೆದ ತಿಂಗಳು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದರು. ಇದೀಗ ಈ ಟೀಸರ್ ಅತಿ ವೇಗವಾಗಿ 1.5 ಮಿಲಿಯನ್ ಲೈಕ್ಸ್ ಪಡೆದುಕೊಳ್ಳುವ ಮೂಲಕ ಟಾಲಿವುಡ್ ನಲ್ಲಿ ಹೊಸ ರೆಕಾರ್ಡ್ ಸೃಷ್ಟಿ ಮಾಡಿದೆ. ಒಟ್ಟಾರೆ ಈ ಟೀಸರ್ ಯುಟ್ಯೂಬ್ ನಲ್ಲಿ 64 ಮಿಲಿಯನ್ ವೀಕ್ಷಣೆ ದಾಖಲಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.
ʼಜೊತೆ ಜೊತೆಯಲಿʼ ಧಾರಾವಾಹಿಯ ಮೀರಾ ಫೋಟೋಶೂಟ್
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಅನಸೂಯ ಭಾರದ್ವಾಜ್, ಪ್ರಕಾಶ್ ರಾಜ್, ದೀಪಕ್ ಶೆಟ್ಟಿ, ದಯಾನಂದ್ ರೆಡ್ಡಿ, ಹಾಗೂ ಕನ್ನಡದ ಡಾಲಿ ಧನಂಜಯ್ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.instagram.com/p/COw6J3FhDSs/?utm_source=ig_web_copy_link