![](https://kannadadunia.com/wp-content/uploads/2020/09/fe2b3dcf-7350-4eda-b905-9db691cc7e6a-2.jpg)
ಖ್ಯಾತ ಬಹುಭಾಷಾ ನಟಿ ಖುಷ್ಬು ಇಂದು 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಖುಷ್ಬು 1980ರಲ್ಲಿ ‘ದಿ ಬರ್ನಿಂಗ್ ಟ್ರೇನ್’ ಎಂಬ ಹಿಂದಿ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ನಾಯಕಿಯಾಗಿ ಮಿಂಚಿದರು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ರಣಧೀರ’ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಖುಷ್ಬು ಎಂಟ್ರಿ ಕೊಟ್ಟ ನಂತರ ಸಾಕಷ್ಟು ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಖುಷ್ಬು 1970 ಸೆಪ್ಟೆಂಬರ್ 29ರಂದು ಜನಿಸಿದ್ದು, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.