
ನಟ ಕಾರ್ತಿಕ್ ಜಯರಾಮ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾರ್ತಿಕ್ ಜಯರಾಮ್ 2011ರಂದು ಕಿಚ್ಚ ಸುದೀಪ್ ಅಭಿನಯದ ‘ಕೆಂಪೇಗೌಡ’ ಚಿತ್ರದಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. 2013ರಂದು ಪ್ರಸಾರವಾಗುತ್ತಿದ್ದ ‘ಅಶ್ವಿನಿ ನಕ್ಷತ್ರ’ ಧಾರವಾಹಿಯಲ್ಲಿ ಜೆ.ಕೆ. ಎಂಬ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು.
‘ಬಿಗ್ ಬಾಸ್’ ಸುದೀಪ್ ಅಭಿಮಾನಿಗಳಿಗೆ ಈ ವಾರವೂ ನಿರಾಸೆ
ಕಾರ್ತಿಕ್ ಜಯರಾಮ್ 2014ರಂದು ‘ಜಸ್ಟ್ ಲವ್’ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ರಾಮ್ಸ್ ರಂಗ ನಿರ್ದೇಶನದ ‘ಐರಾವನ್’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕಾರ್ತಿಕ್ ಜಯರಾಮ್ 1972 ಮೇ 1ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.