![](https://kannadadunia.com/wp-content/uploads/2020/09/1a0ca4ee-1200-4d74-88f9-d32611e3e0a2.jpg)
ಡೈನಮಿಕ್ ಸ್ಟಾರ್ ದೇವರಾಜ್ ಅವರು ಇಂದು 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1988ರಲ್ಲಿ ‘ಮಾವಳ್ಳಿ ಸರ್ಕಲ್’ಸಿನಿಮಾ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ದೇವರಾಜ್ ನಟಿಸಿದ್ದಾರೆ.
ನಟ ದೇವರಾಜ್ ನಾಯಕ ನಟನಾಗಿ ಹಾಗೂ ಖಳನಾಯಕನಾಗಿ ಎಲ್ಲ ಪಾತ್ರವನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
1953 ಸೆಪ್ಟೆಂಬರ್ 20ರಂದು ಜನಿಸಿದ ದೇವರಾಜ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದ ಬಹಳಷ್ಟು ಕಲಾವಿದರು ದೇವರಾಜ್ ಅವರ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ.