![](https://kannadadunia.com/wp-content/uploads/2021/01/afbdcdfc-d27b-47a5-bb56-4bbb922863ed.jpg)
ಖ್ಯಾತ ನಟಿ ಪ್ರೇಮಾ ಇಂದು ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಪ್ರೇಮಾ 1995ರಂದು ಕನ್ನಡದ ‘ಸವ್ಯಸಾಚಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾರಂಗ ಪ್ರವೇಶಿಸಿದರು.
ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ‘ಓಂ’ ಸಿನಿಮಾದಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ರಾಜ್ಯಪ್ರಶಸ್ತಿ ಪಡೆದರು.
ನಟಿ ಪ್ರೇಮಾ ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಪ್ರೇಮಾ 1977 ಜನವರಿ 6ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.