![](https://kannadadunia.com/wp-content/uploads/2020/11/0e5f8f78-06a8-44a4-aaf2-2a18b6cdec9b-1.jpg)
ನಟಿ ಯಜ್ಞ ಶೆಟ್ಟಿ ಇಂದು ತಮ್ಮ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಜ್ಞ ಶೆಟ್ಟಿ 2007 ರಂದು ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು ನವರಸನಾಯಕ ಜಗ್ಗೇಶ್ ಅವರೊಂದಿಗೆ ನಟಿಸಿದ್ದ ‘ಎದ್ದೇಳು ಮಂಜುನಾಥ’ ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು.
ಇತ್ತೀಚೆಗೆ ಯಜ್ಞಾ ಶೆಟ್ಟಿ ನಟಿಸಿರುವ ‘ಆ್ಯಕ್ಟ್ 1978’ ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ. ಯಜ್ಞ ಶೆಟ್ಟಿ 1987 ನವೆಂಬರ್ 19ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.