ಬಾಲಕಲಾವಿದೆಯಾಗಿ ಸಾಕಷ್ಟು ಹೆಸರು ಮಾಡಿದ್ದ ನಟಿ ಬೇಬಿ ಶಾಮಿಲಿ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬೇಬಿ ಶಾಮಿಲಿ ಅವರನ್ನು 2 ವರ್ಷದವರಿದ್ದಾಗ ‘ರಾಜನಾಡೈ’ ಎಂಬ ತಮಿಳು ಚಿತ್ರದಲ್ಲಿ ಕರೆದುಕೊಳ್ಳಲಾಗಿತ್ತು. 1990ರಂದು ಬಿಡುಗಡೆಯಾದ ‘ಅಂಜಲಿ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು.
ಈ ಚಿತ್ರದಿಂದ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆಯಿತು. ಅದೇ ವರ್ಷದಂದು ಬಿಡುಗಡೆಯಾದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ‘ಮತ್ತೆ ಹಾಡಿತು ಕೋಗಿಲೆ’ ಸಿನಿಮಾದಲ್ಲಿ ಪಲ್ಲವಿ ಎಂಬ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು.
ತಮಿಳು, ತೆಲುಗು, ಕನ್ನಡ ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ಬಾಲಕಲಾವಿದೆಯಾಗಿ ಮಿಂಚಿದ್ದಾರೆ.
ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ ರೌಟೇಲಾ
ಬೇಬಿ ಶಾಮಿಲಿ ತಮಿಳು ಚಿತ್ರವೊಂದರಲ್ಲಿ ಕೊನೆಯದಾಗಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು. ನಂತರ 9 ವರ್ಷಗಳ ಬಳಿಕ ಸಿನಿಮಾರಂಗಕ್ಕೆ ರೀ ಎಂಟ್ರಿ ಕೊಟ್ಟ ಶಾಮಿಲಿ ತೆಲುಗಿನ ‘ಓಯ್’ ಸಿನಿಮಾದಲ್ಲಿ ಮೊದಲಬಾರಿ ನಾಯಕಿಯಾಗಿ ನಟಿಸಿದರು.
ಇಂದು ಸಾಮಾಜಿಕ ಜಾಲತಾಣದಲ್ಲಿ ಬೇಬಿ ಶಾಮಿಲಿ ಅವರಿಗೆ ಸಾಕಷ್ಟು ಸಿನಿತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.