
ಪ್ರಿಯಾಂಕಾ ಚೋಪ್ರಾ ಸಹೋದರಿ ನಟಿ ಮೀರಾ ಚೋಪ್ರಾ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೀರಾ ಚೋಪ್ರಾ ತಮಿಳು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಪವನ್ ಕಲ್ಯಾಣ್ ನಟನೆಯ ‘ಬಂಗಾರಂ’ ಸಿನಿಮಾ ಮೂಲಕ ಟಾಲಿವುಡ್ ಗೆ ಪ್ರವೇಶಿಸಿದರು. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
‘ಗೌಳಿ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಹೊಸ ಲುಕ್ ನಲ್ಲಿ ಶ್ರೀನಗರ ಕಿಟ್ಟಿ
ಮೀರಾ ಚೋಪ್ರಾ 2008ರಲ್ಲಿ ತೆರೆಕಂಡ ‘ಅರ್ಜುನ್’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸಿದ್ದರು. ನಂತರ ಕನ್ನಡದ ಯಾವ ಸಿನಿಮಾಗಳಲ್ಲೂ ಮೀರಾ ಚೋಪ್ರಾ ಕಾಣಿಸಿಕೊಂಡಿಲ್ಲ. ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.