
ನಟ ವಿಜಯ್ ರಾಘವೇಂದ್ರ ತಮ್ಮ ಪತ್ನಿ ಸ್ಪಂದನ ಜೊತೆ ಗೋವಾದಲ್ಲಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ನಮ್ಮ ಪ್ರಯಾಣ ದಿನಚರಿಗಳಿಂದ ಒಂದು ಗೋವಾ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ದೊರೆತಿದ್ದು ಸಾಕಷ್ಟು ನೆಟ್ಟಿಗರು ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ನಟ ವಿಜಯ್ ರಾಘವೇಂದ್ರ ಅವರ 50 ನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು.
ಇದಕ್ಕೆ ‘ಸೀತಾರಾಮ್ ಬಿನೋಯ್’ ಎಂಬ ಹೆಸರಿಟ್ಟಿದ್ದು ವಿಜಯ್ ರಾಘವೇಂದ್ರ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
