ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಡ್ರಗ್ಸ್ ದಂಧೆಯಲ್ಲಿ ಮತ್ತಿಬ್ಬರ ಹೆಸರು ಬಹಿರಂಗವಾಗಿದೆ. ಇಬ್ಬರು ಸ್ಟಾರ್ ಸಹೋದರರು ಈ ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಅಂಶ ಬಯಲಾಗಿದೆ.
ಸ್ಯಾಂಡಲ್ ವುಡ್ ನ ಇಬ್ಬರು ಅಣ್ಣ-ತಮ್ಮಂದಿರು ತಮ್ಮ ಫಾರ್ಮ್ ಹೌಸ್ ನಲ್ಲಿ ನಶೆ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಈ ಪಾರ್ಟಿಯಲ್ಲಿ ಹಲವು ನಟ-ನಟಿಯರು ಭಾಗಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಟಾರ್ ಸಹೋದರರ ಪಾರ್ಟಿ ಶುಕ್ರವಾರ ಆರಂಭವಾದರೆ ಭಾನುವಾರದಂದು ಅಂತ್ಯವಾಗುತ್ತಿತ್ತು. ಮೂರು ದಿನಗಳ ಕಾಲ ನಶೆ ಲೋಕದಲ್ಲಿ ತೇಲಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇಬ್ಬರು ಸಹೋದರರು ಸಿಂಥೆಟಿಕ್ ಡ್ರಗ್ಸ್ ಟ್ಯಾಬ್ಲೆಟ್ ಗಳನ್ನು ಸೇವಿಸುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.