ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ಸಂಜನಾ ಮನೆಯಲ್ಲಿ ಸಿಸಿಬಿ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದೆ. ನಟಿ ಸಂಜನಾರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ಕಚೇರಿಗೆ ಕರೆದೊಯ್ದಿದ್ದಾರೆ.
ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಳ್ಳಂ ಬೆಳಿಗ್ಗೆ ನಟಿ ಸಂಜನಾ ಅವರ ಇಂದಿರಾ ನಗರದಲ್ಲಿರುವ ಸಾಯಿತೇಜಾ ಅಪಾರ್ಟ್ ಮೆಂಟ್ ನ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆ ಹಾಗೂ ಅವರ ಕಾರನ್ನು ತೀವ್ರ ಶೋಧ ನಡೆಸಿದ ಅಧಿಕಾರಿಗಳು ಮೂರು ಮೊಬೈಲ್ ಹಾಗೂ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಶೋಧದ ಬಳಿಕ ಸಿಸಿಬಿ ಅಧಿಕಾರಿಗಳು, ನಟಿ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಒಟ್ಟಾರೆ ಸಂಜನಾ ಅವರ ಆಪ್ತ ರಾಹುಲ್ ಹಾಗೂ ಪೃಥ್ವಿ ಶೆಟ್ಟಿ ಸಿಸಿಬಿಗೆ ನೀಡಿದ ಮಾಹಿತಿ ಸಂಜನಾಗೆ ಮುಳುವಾಗುವ ಸಾಧ್ಯತೆಯಿದೆ.