ಬೆಂಗಳೂರು: ಸ್ಯಾಂಡಲ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿಗಳಾದ ದಿಂಗತ್ ಹಾಗೂ ಐಂದ್ರಿತಾ ರೇ ಅವರಿಗೆ ಸಿಸಿಬಿ ನೋಟೀಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.
ಡ್ರಗ್ ಪೆಡ್ಲರ್ ಅನಿಕಾ ನೀಡಿದ ಮಾಹಿತಿ ಆಧರಿಸಿ ನಟ ದಿಗಂತ್ ಹಾಗೂ ಐಂದ್ರಿತಾ ಅವರಿಗೆ ಸಿಸಿಬಿ ನೋಟೀಸ್ ನೀಡಿದೆ. ನೋಟೀಸ್ ನೀಡಿದ್ದ ವೇಳೆ ಸ್ಟಾರ್ ದಂಪತಿಗಳಿಬ್ಬರೂ ಕೇರಳದ ವಯನಾಡ್ ನಲ್ಲಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ್ದಾರೆ. ಆದರೆ ಸಿಸಿಬಿ ಅಧಿಕಾರಿಗಳು ಇಂದೇ ವಿಚಾರಣೆಗೆ ಹಾಜರಾಗಬೇಕು ಇಲ್ಲವಾದಲ್ಲಿ ಮನೆ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಕಾರಣಕ್ಕೆ ದಂಪತಿಗಳು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.
ದಿಗಂತ್ ಹಾಗೂ ಐಂದ್ರಿತಾಗೆ ಮುಂಬೈ ಲಿಂಕಿದ್ದು, ಹಲವು ಬಾರಿ ಮುಂಬೈನಲ್ಲಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಕನ್ನಡದಲ್ಲಿ ಸಿನಿಮಾ ಆಫರ್ ಕಡಿಮೆಯಾದ ಕಾರಣ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಸಂಪರ್ಕದ ಮೂಲಕ ನಟಿ ಐಂದ್ರಿತಾ ತನ್ನ ಪತಿಗೆ ಹಿಂದಿ ಸಿನಿಮಾಗಳಲ್ಲಿ ಅವಕಾಶ ಕೊಡಿಸಿದ್ದಳು. ಹಿಂದಿಯಲ್ಲಿ ವೆಡ್ಡಿಂಗ್ ಪುಲಾವ್ ಎಂಬ ಸಿನಿಮಾದಲ್ಲಿ ದಿಗಂತ್ ಅಭಿನಯಿಸಿದ್ದರು.
ಹೀಗಾಗಿ ದಂಪತಿಗಳಿಬ್ಬರೂ ಬಾಲಿವುಡ್ ಸಂಪರ್ಕದಲ್ಲಿದ್ದು, ಅಲ್ಲಿನ ನಶೆ ಪಾರ್ಟಿಗಳ ಜತೆ ಹಲವಾರು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು. ಸಿನಿಮಾ ಕಡಿಮೆಯಾದ ಹಿನ್ನಲೆಯಲ್ಲಿ ಪಾರ್ಟಿ, ಇವೆಂಟ್ ಗಳಲ್ಲೇ ಹೆಚ್ಚು ಹಣ ಗಳಿಸುತ್ತಿದ್ದ ದಂಪತಿ ಪ್ರತಿ ಪಾರ್ಟಿಗಳಿಗೂ ಪ್ರತ್ಯೇಕವಾಗಿ ಹಣಗಳನ್ನು ಪಡೆಯುತ್ತಿದ್ದರು ಎನ್ನಲಾಗಿದೆ.
ಒಟ್ಟಾರೆ ಸಿಸಿಬಿ ಮುಂದೆ ಹಾಜರಾಗಲಿರುವ ದಿಂಗತ್ ಹಾಗೂ ಐಂದ್ರಿತಾರನ್ನು ಸಿಸಿಬಿ ವಶಕ್ಕೆ ಪಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.