‘ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಚಿರಂಜೀವಿ ಸರ್ಜಾ 39ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗ ಮಾತ್ರವಲ್ಲದೇ ಅಭಿಮಾನಿಗಳೂ ಸಹ ಆಘಾತಕ್ಕೊಳಗಾಗಿದ್ದಾರೆ. ಅದರಲ್ಲೂ ಚಿರಂಜೀವಿ ಸರ್ಜಾ ಅವರ ಆತ್ಮೀಯ ಬಳಗ ತೀವ್ರ ಶಾಕ್ ಗೆ ಒಳಗಾಗಿದೆ.
ಚಿರಂಜೀವಿ ಸರ್ಜಾ ಅವರ ಆತ್ಮೀಯ ಸ್ನೇಹಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸ್ನೇಹಿತನ ಸಾವಿನಿಂದ ದುಃಖಕ್ಕೊಳಗಾಗಿದ್ದರೂ ಅಂತಹ ಸಂದರ್ಭದಲ್ಲಿ ತಮ್ಮ ಕರ್ತವ್ಯ ಮೆರೆದಿದ್ದಾರೆ.
ಚಿರಂಜೀವಿ ಸರ್ಜಾ ಅವರ ಸಹೋದರ ಧ್ರುವ ಸರ್ಜಾ ಅವರನ್ನು ಸಮಾಧಾನ ಪಡಿಸುತ್ತಲೇ ಆಸ್ಪತ್ರೆಯಿಂದ ಪಾರ್ಥಿವ ಶರೀರ ಬಂದ ವೇಳೆ ತಾವೇ ಖುದ್ದಾಗಿ ಮುಂದೆ ನಿಂತು ಅದನ್ನು ಇಳಿಸಿದ್ದಾರೆ. ಜೊತೆಗೆ ಮುಂದೆ ಮಾಡುವ ಕಾರ್ಯಗಳ ಕುರಿತು ಚಿರಂಜೀವಿ ಸರ್ಜಾ ಕುಟುಂಬದ ಜೊತೆ ಸಮಾಲೋಚನೆ ನಡೆಸಿದ್ದಾರೆ.