alex Certify ಸೌಂದರ್ಯ ವೃದ್ಧಿಸಲು ಪ್ರತಿದಿನ ಈ ನೀರು ಕುಡೀತಾರೆ ನಟಿ ರವೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ವೃದ್ಧಿಸಲು ಪ್ರತಿದಿನ ಈ ನೀರು ಕುಡೀತಾರೆ ನಟಿ ರವೀನಾ

ರವೀನಾ ಟಂಡನ್ ಸುಂದರವಾದ ನಟಿಯರಲ್ಲಿ ಒಬ್ಬರು. ಮೇಕಪ್ ಇಲ್ಲದೆಯೂ ಇವರ ಮುಖ ಹೊಳೆಯುತ್ತಿರುತ್ತದೆ. ಅಂದಹಾಗೇ ಅವರು ಯಾವುದೇ ಸೌಂದರ್ಯ ಚಿಕಿತ್ಸೆಯನ್ನು ಮಾಡಿಕೊಂಡಿಲ್ಲ. ತಮ್ಮ ಹೊಳೆಯುವ ಮುಖದ ರಹಸ್ಯವನ್ನು ರವೀನಾ ಬಹಿರಂಗಪಡಿಸಿದ್ದಾರೆ. ಅದು ಏನೆಂಬುದನ್ನು ತಿಳಿದುಕೊಳ್ಳೋಣ.

ಅವರ ಪ್ರಕಾರ ನಾವು ತಿಂದಿದ್ದು ನಮ್ಮ ಚರ್ಮದ ಮೇಲೆ ಕಾಣಿಸುತ್ತದೆ. ಆದಕಾರಣ ಆರೋಗ್ಯಕರವಾದ ಆಹಾರ ತಿನ್ನಿ ಎನ್ನುತ್ತಾರೆ. ಹಾಗಾಗಿ ಅವರು ದೇಹಕ್ಕೆ ಬೇಕಾದ ಸಾಕಷ್ಟು ತಾಜಾ ಹಣ್ಣುಗಳನ್ನು, ತರಕಾರಿಗಳನ್ನು ತಿನ್ನುತ್ತಾರಂತೆ. ಜಿಡ್ಡಿನ ಮತ್ತು ಕೊಬ್ಬಿನ ಪದಾರ್ಥಗಳಿಂದ ದೂರವಿರುತ್ತಾರಂತೆ. ಹಾಗೇ ಪ್ರತಿದಿನ ಎಳನೀರು ಕುಡಿಯುತ್ತಾರಂತೆ.

ಹೆಚ್ಚು ಹೊತ್ತು ಮೇಕಪ್ ಹಾಕಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಇದರಿಂದ ಮುಖದ ಚರ್ಮದ ಉಸಿರಾಟಕ್ಕೆ ತೊಂದರೆಯಾಗುತ್ತದೆಯಂತೆ. ಇನ್ನು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರಂತೆ. ಮತ್ತು ಕೂದಲಿನ ಆರೋಗ್ಯ ಕಾಪಾಡಲು ಯಾವಾಗಲೂ ಮೊಸರಿನ ಹೇರ್ ಪ್ಯಾಕ್ ಹಾಕುತ್ತಾರಂತೆ.

ಸೌಂದರ್ಯ ವೃದ್ಧಿಸಲು ನಿದ್ರೆ ತುಂಬಾ ಮುಖ್ಯ ಎನ್ನುವ ರವೀನಾ 5 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸುತ್ತಾರೆ. ಹಾಗೇ ಮಧ್ಯಾಹ್ನದ ವೇಳೆ ಸಣ್ಣದೊಂದು ನಿದ್ರೆ ಕೂಡ ಮಾಡುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...