ಬೆಂಗಳೂರು: ಸಿಸಿಬಿ ನೋಟೀಸ್ ನೀಡಿದ್ದು ನಿಜ. ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ರಾಗಿಣಿ, ಕಡಿಮೆ ಸಮಯವಿದ್ದುದರಿಂದ ನನಗೆ ಸಿಸಿಬಿ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ. ಪೊಲೀಸರ ನೋಟೀಸ್ ಗೆ ಓರ್ವ ಪ್ರಜೆಯಾಗಿ ಹಾಜರಾಗುವುದು ನನ್ನ ಕರ್ತವ್ಯ. ಸೋಮವಾರ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.
ಕಾನೂನನ್ನು ಎಲ್ಲರೂ ಗೌರವಿಸಬೇಕು. ನನಗೂ ಕಾನೂನಿನ ಬಗ್ಗೆ ಗೌರವವಿದೆ. ಇನ್ನು ಕಾನೂನು ಬಾಹಿರ ಚಟುವಟಿಕೆಗಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.