![](https://kannadadunia.com/wp-content/uploads/2020/09/f550ac94ec6781bf13449101c63c3475f38e68671965c1b9efe0c02815048eab.jpg)
ಸುನಿ ನಿರ್ದೇಶನದ ನಟ ಶರಣ್ ಅಭಿನಯದ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್ ಅನ್ನು ಸೆಪ್ಟೆಂಬರ್ 14ಕ್ಕೆ ಪುನರಾರಂಭ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಬಾಕಿ ಇರುವ ಚಿತ್ರೀಕರಣ ಪ್ರಾರಂಭಿಸಲು ಸಿದ್ದರಾಗಿದ್ದಾರೆ.
ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಎಂದು ಹೇಳಲಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಿಸುತ್ತಿದ್ದು, ಚಿತ್ರೀಕರಣ ಪುನಾರಂಭಕ್ಕೆ ಚಿತ್ರತಂಡ ಸಜ್ಜಾಗಿದೆ.