alex Certify ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡಬೇಕಿದ್ದ ಕಂಗನಾ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡಬೇಕಿದ್ದ ಕಂಗನಾ ಹೇಳಿದ್ದೇನು…?

ಬಾಲಿವುಡ್ ನಟಿ ಕಂಗನಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತ್ರ ಕಂಗನಾ ಹೇಳಿಕೆ ಹೆಚ್ಚು ಮಹತ್ವ ಪಡೆದಿದೆ. ಕಂಗನಾ, ಸುಶಾಂತ್ ಸಾವಿನ ನಂತ್ರ ಕೆಲ ಪ್ರೊಡಕ್ಷನ್ ಹೌಸ್ ಹಾಗೂ ನಟರ ವಿರುದ್ಧ ಹರಿಹಾಯ್ದಿದ್ದರು.

ಕಂಗನಾ ಈಗ ಮತ್ತೆ ಸುಶಾಂತ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, 2017ರಲ್ಲಿ ಸುಶಾಂತ್ ಜೊತೆ ಚಿತ್ರವೊಂದರಲ್ಲಿ ನಟಿಸಬೇಕಿತ್ತು. ಈ ಸಂಬಂಧ ನಾನು ಕಥೆ ಕೇಳಿದ್ದೆ. ಆದ್ರೆ ಕಥೆ ಕೇಳಲು ಹೊರಟಿದ್ದ ವೇಳೆ ನನಗೆ ಹೃತಿಕ್ ರೋಷನ್ ಕಡೆಯಿಂದ ನೊಟೀಸ್ ಬಂದಿತ್ತು. ಆ ಟೆನ್ಷನ್ ನಲ್ಲಿಯೇ ನಾನು ಕಥೆ ಕೇಳಿದ್ದೆ. ಒಂದು ವರ್ಷ ಕೆಟ್ಟ ಪರಿಸ್ಥಿತಿಯಲ್ಲಿದ್ದ ನನಗೆ ಯಾವುದೇ ಚಿತ್ರಕ್ಕೆ ಸಹಿ ಮಾಡುವ ಆಸಕ್ತಿಯಿರಲಿಲ್ಲ.

ಆಗ ನಾನು ಸಿನಿಮಾಕ್ಕೆ ಸಹಿ ಹಾಕಿದ್ದರೆ ನಾವಿಬ್ಬರು ಸೇರಿ ಒಂದು ಚಿತ್ರ ಮಾಡುವ ಅವಕಾಶ ಸಿಗ್ತಿತ್ತು. ಆದ್ರೆ ದುರಾದೃಷ್ಟಕರ. ಆಗ ನಾವು ಸಿನಿಮಾ ಮಾಡಿದ್ದರೆ ನಮ್ಮಿಬ್ಬರ ಸ್ಥಿತಿಯೂ ಬೇರೆಯಿರುತ್ತಿತ್ತೇನೋ ಎಂದು ಆಲೋಚನೆ ಮಾಡ್ತೇನೆಂದು ಕಂಗನಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...