
ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಥಮ ಬಾರಿ ಪ್ರದರ್ಶನಗೊಳ್ಳಲಿದೆ. ಸುಶಾಂತ್ ಗೆ ಗೌರವ ಸಲ್ಲಿಸಲು ಎಲ್ಲಾ ಚಂದಾದಾರರಿಗೆ ಮಾತ್ರವಲ್ಲದೆ ಚಂದಾದಾರರಲ್ಲದವರಿಗೂ ಇದನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಆದ್ರೆ ಇದನ್ನು ಸುಶಾಂತ್ ಕುಟುಂಬದವರು ವಿರೋಧಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಸಂಬಂಧಿ ಮತ್ತು ಬಿಜೆಪಿ ಶಾಸಕ ನೀರಜ್ ಸಿಂಗ್ ಚಿತ್ರದ ಡಿಜಿಟಲ್ ಬಿಡುಗಡೆಯನ್ನು ನಟನ ವಿರುದ್ಧದ ಪಿತೂರಿ ಎಂದಿದ್ದಾರೆ. ಸುಶಾಂತ್ ಆತ್ಮದ ವಿರುದ್ಧ ತಪ್ಪಾಗಿ ನಡೆದುಕೊಳ್ಳಲಾಗ್ತಿದೆ. ಆತನ ವಿರುದ್ಧ ಇನ್ನೂ ಪಿತೂರಿ ನಡೆಯುತ್ತಿದೆ. ಚಿತ್ರದ ಡಿಜಿಟಲ್ ಬಿಡುಗಡೆಯಿಂದ ಇದು ಸ್ಪಷ್ಟವಾಗಿದೆ ಎಂದಿದ್ದಾರೆ.
ಚಿತ್ರವನ್ನು ಸಿನಿಮಾ ಹಾಲ್ ನಲ್ಲಿ ಬಿಡುಗಡೆ ಮಾಡುವುದಕ್ಕೆ ಭಿನ್ನ ಮಹತ್ವವಿದೆ. ಅದ್ರಲ್ಲಿ ಎಷ್ಟು ವೀಕ್ಷಕರು ವೀಕ್ಷಣೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಆದ್ರೆ ಇದ್ರಲ್ಲಿ ತಿಳಿಯುವುದಿಲ್ಲ ಎಂದಿದ್ದಾರೆ. ಸುಶಾಂತ್ ಆತ್ಮಹತ್ಯೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಸುಶಾಂತ್ ಜೊತೆ ಚಿತ್ರರಂಗ ತಪ್ಪಾಗಿ ನಡೆದುಕೊಂಡಿದೆ ಎಂಬ ಆರೋಪವಿದೆ.